Select Your Language

Notifications

webdunia
webdunia
webdunia
webdunia

ಮತಾಂತರ : ಪತ್ನಿಗೆ ಸಿಗರೇಟ್ನಿಂದ ಸುಟ್ಟು, ಒತ್ತಾಯದಿಂದ ಮಾಂಸ ತಿನ್ನಿಸಿದ!

ಮತಾಂತರ
ಲಕ್ನೋ : ಮತಾಂತರಕ್ಕೆ ಒಪ್ಪದ ಪತ್ನಿಯನ್ನು ಪ್ರತಿನಿತ್ಯ ಥಳಿಸಿ, ಸಿಗರೇಟ್ ನಿಂದ ಸುಟ್ಟು ಬಲವಂತವಾಗಿ ಮಾಂಸ ತಿನ್ನಿಸಿದ ಘಟನೆಯೊಂದು ಉತ್ತರಪ್ರದೆಶ ಲಕ್ನೋದಲ್ಲಿ ನಡೆದಿದೆ.

ಆರೋಪಿ ಪತಿಯನ್ನು ಚಂದ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಈತ ತಾನು ಹಿಂದೂ ಅಂತ ಹೇಳಿಕೊಂಡು ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ. ಆ ಬಳಿಕ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 

ಪತಿ ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೇಹದ ಮೇಲೆಲ್ಲ ಸಿಗರೇಟ್ನಿಂದ ಸುಟ್ಟಿದ್ದಾನೆ. ಅಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದಿದ್ದಕ್ಕೆ ನನ್ನ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ. ಇಷ್ಟು ಸಾಲದೆಂಬಂತೆ ಒಂದು ವೇಳೆ ನೀನು ಮತಾಂತರಕ್ಕೆ ಒಪ್ಪದಿದ್ದರೆ ನನ್ನ ಸಂಬಂಧಿಕರಿಂದಲೇ ನಿನ್ನ ಮೇಲೆ ಅತ್ಯಾಚಾರ ಮಾಡಿಸುತ್ತೇನೆ.

ಪ್ರತಿ ದಿನ ಪತಿಯ ಹಿಂಸೆ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ದೂರು ನೀಡಲೆಂದು ಹೋದರೆ ಪತಿ ನನ್ನನ್ನು ಕೂಡಿ ಹಾಕಿ ಥಳಿಸುತ್ತಾನೆ. 5 ತಿಂಗಳ ಗರ್ಭಿಣಿ ಇದ್ದಾಗಲೂ ಆತ ನನ್ನ ಹೊಟ್ಟೆಗೆ ಹೊಡೆದಿದ್ದರಿಂದ ಗರ್ಭಪಾತವಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಹರಕೆಯ ಕುರಿಯಾಗಲಿದ್ದಾರೆ : ಹೆಚ್.ಡಿ.ಕೆ