Select Your Language

Notifications

webdunia
webdunia
webdunia
webdunia

ವಿವಾದಕ್ಕೆ ಕಾರಣವಾಯ್ತು ಕೇರಳ ಶಾಸಕಿಯ ಪುತ್ರಿಯ ವಿವಾಹ

ಕೇರಳ ಶಾಸಕರು
Trissur , ಬುಧವಾರ, 7 ಜೂನ್ 2017 (10:24 IST)
ತ್ರಿಶ್ಶೂರ್: ಕೇರಳದ ಆಡಳಿತಾರೂಢ ಸಿಪಿಐ ಪಕ್ಷದ ಶಾಸಕರೊಬ್ಬರ ವಿವಾಹ ಇದೀಗ ವಿವಾದಕ್ಕೆ ಕಾರಣವಾಗಿದೆ. ಹಾಗಂತ ಮದುವೆಗೇನೂ ಅಡ್ಡಿಯಾಗಿಲ್ಲ. ಆದರೆ ಪುತ್ರಿಯ ಮದುವೆ ಶಾಸಕಿಯನ್ನು ಸಂಕಟಕ್ಕೆ ಸಿಲುಕಿಸಿದೆ.

 
ತ್ರಿಶ್ಶೂರ್ ನ ಸಿಪಿಐ ಶಾಸಕಿ ಗೀತಾ ಗೋಪಿ ವಿವಾಹ ವಿವಾದಕ್ಕೆ ಕಾರಣವಾಗಿದೆ. ಕೇರಳದಲ್ಲಿ ಮದುವೆಯೆಂದರೆ ವಧುವಿಗೆ ಮೈತುಂಬಾ ಒಡವೆ ಹಾಕುವುದು ಸಾಮಾನ್ಯ. ಆದರೆ ಸರಳತೆ ಮೆರೆಯಬೇಕಿದ್ದ ಶಾಸಕರೇ ತಮ್ಮ ಪುತ್ರಿಯ ಮೈ ತುಂಬಾ ಒಡವೆ ಹೇರಿ ಪ್ರದರ್ಶನ ಮಾಡಿದ್ದು ಪಕ್ಷದವರಲ್ಲೇ ಅಸಮಾಧಾನ ತಂದಿದೆ.

ಈ ವಧುವಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬ ಸಿಪಿಐ ನಾಯಕ ಹಾಗೂ ಕೇರಳ ಸರ್ಕಾರದ ಕೃಷಿ ಸಚಿವ  ಮುಲ್ಲಕ್ಕರ ರತ್ನಾಕರನ್ ರಾಜ್ಯ ಸದನದಲ್ಲಿಯೇ ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕುವಂತಹ ನಿಯಮ ತರಬೇಕೆಂದು ಸಿಎಂ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಸಿಎಂ ಯೋಗಿಗೆ ಮುಜುಗರ ತರುವ ಕೆಲಸ ಮಾಡಿದ ಅಧಿಕಾರಿಗಳು!