Publish Date: Wed, 07 Jun 2017 (09:15 IST)
Updated Date: Wed, 07 Jun 2017 (09:17 IST)
ಲಕ್ನೋ: ನಾನು ಭೇಟಿ ನೀಡುವ ಸ್ಥಳಗಳಲ್ಲಿ ವಿಶೇಷ ಸೌಲಭ್ಯ ಒದಗಿಸಿ ಮುಜುಗರ ತರಬೇಡಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಇತ್ತೀಚೆಗಷ್ಟೇ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಆದರೂ, ಸಿಎಂ ಯೋಗಿಗೆ ಇರಿಸುಮುರಿಸಾಗುವಂತೆ ಅಧಿಕಾರಿಗಳು ಮಾಡಿದ್ದಾರೆ.
ಅಲಹಾಬಾದ್ ನ ಆಸ್ಪತ್ರೆಯೊಂದಕ್ಕೆ ಪರಿಶೀಲನೆಗಾಗಿ ಸಿಎಂ ಯೋಗಿ ಭೇಟಿ ನೀಡುವ ವೇಳೆಗೆ ಸುಮಾರು 20 ಎಸಿ ಅಳವಡಿಸಿದ ಅಧಿಕಾರಿಗಳು, ಸಿಎಂ ಅತ್ತ ಮರಳುತ್ತಿದ್ದಂತೇ ಎಲ್ಲವನ್ನೂ ಹೊತ್ತೊಯ್ದು ಮತ್ತೊಮ್ಮೆ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ.
ಇತ್ತೀಚೆಗಷ್ಟೇ ಹುತಾತ್ಮ ಯೋಧನ ಮನೆಗೆ ಸಿಎಂ ಭೇಟಿ ಕೊಡುವ ಸಂದರ್ಭದಲ್ಲಿಯೂ ಅಧಿಕಾರಿಗಳು ಇದೇ ರೀತಿ ಮಾಡಿದ್ದರಿಂದ ಸರ್ಕಾರ ವಿಪಕ್ಷಗಳ ಕೈಯಲ್ಲಿ ಸಾಷಕ್ಟು ಟೀಕೆಗೊಳಗಾಗಿತ್ತು. ಈ ಹಿನ್ನಲೆಯಲ್ಲಿ ಸಿಎಂ ಯೋಗಿ ತಾವು ಭೇಟಿ ಕೊಡುವ ಸ್ಥಳದಲ್ಲಿ ಆ ಸಂದರ್ಭಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಬೇಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದರು. ಹಾಗಿದ್ದರೂ ಅಧಿಕಾರಿಗಳು ಮತ್ತದೇ ತಪ್ಪು ಮಾಡಿದ್ದಾರೆ.