ಮಹಾರಾಷ್ಟ್ರ : 33 ವರ್ಷದ ವಿಚ್ಛೇಧಿತ ಮಹಿಳೆಯ ಮೇಲೆ ಕಾನ್ಸ್ಟೇಬಲ್ ಒಬ್ಬ ಬೆದರಿಕೆಯೊಡ್ಡಿ 3 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ವಿಕಾರಂಸಿಂಗ್ ಬನಾಫರ್(30) ಇಂತಹ ಕೃತ್ಯ ಎಸಗಿದ ಆರೋಪಿ. ಪೊಲೀಸ್ ಇಲಾಖೆಗೆ ನೇಮಕಾತಿಯ ವೇಳೆ ಮಹಿಳೆ ಪರಿಚಯನಾದ ಆರೋಪಿ ಆಕೆಯನ್ನು ಸ್ನೇಹಿತನ ಮನೆಗೆ ಕರೆದೊಯ್ದು ಆಹಾರದಲ್ಲಿ ನಿದ್ರೆ ಬರುವ ಮಾತ್ರೆಗಳನ್ನು ಮಿಕ್ಸ್ ಮಾಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ವಿಡಿಯೋ ಮಾಡಿಕೊಂಡು ಮೂರು ವರ್ಷಗಳ ಕಾಲ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಪದೇ ಪದೇ ಮಾನಭಂಗ ಎಸಗಿದ್ದಾನೆ.
ಈ ಬಗ್ಗೆ ಮಹಿಳೆ ಅತ್ಯಾಚಾರಿ ಕಾಮುಕ ಆರೋಪಿ ಕಾನ್ ಸ್ಟೇಬಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.