ರೋಹ್ಟಕ್ (ಹರಿಯಾಣ): ರೋಹ್ಟಕ್‌ನ ಸಂಪ್ಲಾ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ ಘಟನೆಯ ಕುರಿತು ತನಿಖೆ ನಡೆಸಲು ಹರಿಯಾಣ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.
ಸಂಪ್ಲಾ ಡಿಎಸ್‌ಪಿ ರಜನೀಶ್ ಕುಮಾರ್, "ಎಸ್‌ಐಟಿ ರಚಿಸಲಾಗಿದೆ. ಆಕೆಯ ಫೋನ್ ವಶಪಡಿಸಿಕೊಳ್ಳಲಾಗಿದೆ. ನಾವು ಸೈಬರ್, ಎಫ್‌ಎಸ್‌ಎಲ್ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಮೃತರ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಪೊಲೀಸರು ತನಿಖೆಯಲ್ಲಿ ಸೈಬರ್ ಮತ್ತು ಫೋರೆನ್ಸಿಕ್ ತಂಡಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೃತರು ಹರಿಯಾಣದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ ಎಂದು ಸಂಪ್ಲಾ ಡಿಎಸ್ಪಿ ಹೇಳಿದ್ದಾರೆ.
ಒಮ್ಮೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದರು. ಬ್ಯಾಗ್‌ನೊಳಗೆ ಮೃತದೇಹ ಪತ್ತೆಯಾಗಿದೆ. ನಂತರ, ಆಕೆಯನ್ನು ಹಿಮಾನಿ ನರ್ವಾಲ್ ಎಂದು ಗುರುತಿಸಲಾಗಿದೆ. ನಾವು ಆಕೆಯ ಕುಟುಂಬವನ್ನು ಸ್ಥಳಕ್ಕೆ ಕರೆಸಿದ್ದೇವೆ ಮತ್ತು ಆಕೆಯ ಮೃತದೇಹವನ್ನು ಗುರುತಿಸಲಾಗಿದೆ. ನಾವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ನಾವು ಸಾಧ್ಯವಾದಷ್ಟು ಬೇಗ ವಿಷಯವನ್ನು ಪರಿಹರಿಸುತ್ತೇವೆ ಎಂದು ಡಿಎಸ್ಪಿ ರಜನೀಶ್ ಕುಮಾರ್ ಹೇಳಿದರು.
ಚುನಾವಣೆ ಮತ್ತು ಪಕ್ಷ ತನ್ನ ಮಗಳ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಹಿಮಾನಿ ನರ್ವಾಲ್ ತಾಯಿ ಆರೋಪಿಸಿದ್ದಾರೆ. ''ಚುನಾವಣೆ ಮತ್ತು ಪಕ್ಷ ನನ್ನ ಮಗಳ ಪ್ರಾಣವನ್ನೇ ತೆಗೆದಿದೆ. ನನ್ನ ಮಗಳು ರಾಹುಲ್ ಗಾಂಧಿ ಜತೆಗೆ ಗುರುತಿಸಿಕೊಂಡು, ಪಕ್ಷದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಿದ್ದರು. ಆಕೆಯ ಮೇಲೆ ಅಸೂಯೆ ಕೂಡಾ ಇತ್ತು ಎಂದು ದೂರಿದ್ದಾರೆ.
"ನಮಗೆ ಪೊಲೀಸ್ ಠಾಣೆಯಿಂದ (ಘಟನೆಯ ಬಗ್ಗೆ) ಫೋನ್ ಕರೆ ಬಂದಿದೆ. ನನ್ನ ಮಗಳು ಆಶಾ ಹೂಡಾ (ಭೂಪಿಂದರ್ ಸಿಂಗ್ ಹೂಡಾ ಅವರ ಪತ್ನಿ) ಅವರಿಗೆ ತುಂಬಾ ಹತ್ತಿರವಾಗಿದ್ದಳು, ಆಕೆಗೆ ನ್ಯಾಯ ಸಿಗುವವರೆಗೂ ನಾನು ಅವಳ ಅಂತಿಮ ವಿಧಿಗಳನ್ನು ನಡೆಸುವುದಿಲ್ಲ..."