ನವದೆಹಲಿ: ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರವಾಗಿದ್ದು, ಇಂದು ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಹೊಸ ಕಟ್ಟಡದೊಂದಿಗೆ ಲಕ್ ಕೂಡಾ ಬದಲಾಗುವ ನಿರೀಕ್ಷೆಯಿದೆ.
ಇದುವರೆಗೆ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿ ದಿಲ್ಲಿಯ 24, ಅಕ್ಬರ್ ರಸ್ತೆಯಲ್ಲಿದೆ. ಇನ್ನೀಗ ಇಲ್ಲಿಂದ ಕೆಲವೇ ಕಿ.ಮೀ. ದೂರದಲ್ಲಿರುವ 9ಎ, ಕೋಟ್ಲಾ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಭವನಕ್ಕೆ ಸ್ಥಳಾಂತರವಾಗುತ್ತಿದೆ.
ಈ ಮೂಲಕ 48 ವರ್ಷಗಳಿಂದ ಇದ್ದ ಪ್ರಧಾನ ಕಚೇರಿ ಸ್ಥಳಾಂತರವಾಗುತ್ತಿದೆ. ಇನ್ನೀಗ ಹಳೆಯ ಕಟ್ಟಡ ಇತಿಹಾಸದ ಭಾಗವಾಗಲಿದೆ. 1978 ರಲ್ಲಿ ಕಾಂಗ್ರೆಸ್ ನಿಂದ ಇಂದಿರಾ ಗಾಂಧಿ ಬಣ ಪ್ರತ್ಯೇಕವಾಯಿತು. ಅಂದು ರಾಜ್ಯಸಭೆ ಸದಸ್ಯರಾಗಿದ್ದ ಆಂಧ್ರದ ಜಿ ಕೆ ವೆಂಕಟಸ್ವಾಮಿ ಸ್ವಾಮಿ ಈ ಬಂಗಲೆಯನ್ನು ಬಿಟ್ಟುಕೊಟ್ಟಿದ್ದರು.
ಈಗ ಅಕ್ಬರ್ ರಸ್ತೆಯಲ್ಲಿನ ಬಂಗ್ಲೆ ಸೇರಿ ಕಾಂಗ್ರೆಸ್ ಹೊಂದಿದ್ದ ನಾಲ್ಕೂ ಕಟ್ಟಡಗಳ ಖಾಲಿ ಮಾಡುವಂತೆ 2015 ರಲಲಿ ಮೋದಿ ಸರ್ಕಾರ ನೋಟಿಸ್ ನೀಡಿತ್ತು. ಈ ಹಿನ್ನಲೆಯಲ್ಲಿ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಲಾಗುತ್ತಿದೆ. ಸೋನಿಯಾ ಗಾಂಧಿ ಹೊಸ ಕಟ್ಟಡಕ್ಕೆಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.