Select Your Language

Notifications

webdunia
webdunia
webdunia
webdunia

ರಾಜ್ಯಸಭೆಯಲ್ಲಿ ಮಾತನಾಡಲು ಹೊರಟ ಸಚಿನ್ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸಂಸದರು!

ರಾಜ್ಯಸಭೆಯಲ್ಲಿ ಮಾತನಾಡಲು ಹೊರಟ ಸಚಿನ್ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸಂಸದರು!
ನವದೆಹಲಿ , ಶುಕ್ರವಾರ, 22 ಡಿಸೆಂಬರ್ 2017 (09:54 IST)
ನವದೆಹಲಿ: ಎಲ್ಲಾ ಸರಿ ಹೋಗಿದ್ದರೆ ಸಚಿನ್ ತೆಂಡುಲ್ಕರ್ ನಿನ್ನೆ ಪ್ರಥಮ ಬಾರಿಗೆ ರಾಜ್ಯ ಸಭೆಯಲ್ಲಿ ಸಂಸದರಾಗಿ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್ ಸದಸ್ಯರ ಗದ್ದಲದಿಂದಾಗಿ ಮೊದಲ ಪ್ರಯತ್ನದಲ್ಲೇ ಡಕ್ ಔಟ್ ಆಗಿದ್ದಾರೆ!
 

ನಿನ್ನೆ ಮಧ್ಯಾಹ್ನದ ಅವಧಿಯಲ್ಲಿ ಮೇಲ್ಮನೆಯಲ್ಲಿ ಸಚಿನ್ ತೆಂಡುಲ್ಕರ್ ದೇಶದ ಕ್ರೀಡಾ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಲು ಅವಕಾಶ ಕೋರಿದ್ದರು. ಅದರಂತೆ ಅವರು ಮಾತನಾಡಲು ಎದ್ದು ನಿಂತಾಗ ವಿಪಕ್ಷ ಕಾಂಗ್ರೆಸ್ ಮನಮೋಹನ್ ಸಿಂಗ್ ಪಾಕ್ ಅಧಿಕಾರಿಗಳೊಂದಿಗೆ ಮಾತನಾಡಿದ್ದರು ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದಕ್ಕೆ ಕ್ಷಮೆ ಯಾಚಿಸಬೇಕೆಂದು ಗದ್ದಲವೆಬ್ಬಿಸಿದರು.

ಇದರಿಂದಾಗಿ ಸಚಿನ್ 10 ನಿಮಿಷ ಮೌನವಾಗಿ ನಿಲ್ಲಬೇಕಾಯಿತು. ಅತ್ತ ಸಭಾಪತಿ ವೆಂಕಯ್ಯನಾಯ್ಡು ‘ನೋಡಿ ಮಾತನಾಡಲು ನಿಂತವರು ಭಾರತ ರತ್ನ ಪಡೆದ ಹೆಮ್ಮೆಯ ಕ್ರೀಡಾಳು ಕೂಡಾ. ದಯವಿಟ್ಟು ಅವರಿಗೆ ಮಾತನಾಡಲು ಅವಕಾಶ ಕೊಡಿ. ಅವಮಾನ ಮಾಡಬೇಡಿ’ ಎಂದು ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರು ಗದ್ದಲ ಮುಂದುವರಿಸಿದರು. ಇದರಿಂದಾಗಿ ಸಭಾಪತಿ ಕಲಾಪವನ್ನು ಮುಂದೂಡಿದರು.

ಹೀಗಾಗಿ ನಿನ್ನೆ ಸಚಿನ್ ಮಾತನಾಡುವ ಅವಕಾಶ ಒದಗಿಬರಲೇ ಇಲ್ಲ. ಈ ಬಗ್ಗೆ ಸಂಸದೆ ಜಯಾ ಬಚ್ಚನ್ ಸೇರಿದಂತೆ ಹಲವರು ಗದ್ದಲವೆಬ್ಬಿಸಿದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಹೆಸರನ್ನು ವಿಶ್ವದಾದ್ಯಂತ  ಉತ್ತುಂಗಕ್ಕೇರಿಸಿದ ವ್ಯಕ್ತಿಯೊಬ್ಬ ಮಾತನಾಡಲು ನಿಂತರೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಜಯಾ ಬಚ್ಚನ್ ಆಕ್ರೋಶ ವ್ಯಕ್ತಪಡಿಸಿದರು. ಏನೇ ಆದರೂ ಕ್ರಿಕೆಟ್ ಮೈದಾನದ ಹೊರತಾಗಿ ಸಚಿನ್ ಮೊದಲ ಇನಿಂಗ್ಸ್ ಶೂನ್ಯ ಸಂಪಾದನೆಯಾಗಿದ್ದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಈ ವರ್ಷ ನಡೆದ ಸಾಲು ಸಾಲು ಸಾವು ನೋವುಗಳು!