Publish Date: Thu, 21 Dec 2017 (10:02 IST)
Updated Date: Thu, 21 Dec 2017 (10:04 IST)
ನವದೆಹಲಿ: ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾದ ನಂತರ ಇದುವರೆಗೆ ಕ್ರಿಕೆಟ್ ದೇವರು ಸಚಿನ್
ತೆಂಡುಲ್ಕರ್ ಮಾತನಾಡುವುದು ಬಿಡಿ, ಸಂಸತ್ತಿಗೆ ಹಾಜರಾಗಿದ್ದೇ ಎರಡೋ, ಮೂರೋ ಬಾರಿ. ಆದರೆ ಇಂದು ಇದೇ ಮೊದಲ ಬಾರಿಗೆ ಸಚಿನ್ ರಾಜ್ಯಸಭೆಯಲ್ಲಿ ತಮ್ಮ ಹೊಸ ಇನಿಂಗ್ಸ್ ಶುರು ಮಾಡಲಿದ್ದಾರೆ!
ಇದುವರೆಗೆ ಸಚಿನ್ ತಮ್ಮ ಅಧಿಕಾರಾವಧಿಯ 348 ದಿನಗಳ ಕಲಾಪದ ಕಾಲಾವಧಿಯಲ್ಲಿ ಕೇವಲ 23 ದಿನ ಹಾಜರಾಗಿದ್ದಾರೆ. ಇದರೊಂದಿಗೆ ರಾಜ್ಯಸಭೆಯಲ್ಲಿ ಕಳಪೆ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಆದರೆ ಇದೀಗ ತಮ್ಮ ಅಧಿಕಾರಾವಧಿ ಪೂರೈಸಲು 1 ವರ್ಷ ಬಾಕಿಯಿರುವಾಗ ಭರ್ಜರಿ ಇನಿಂಗ್ಸ್ ಆಡಲು ನಿರ್ಧರಿಸಿರುವ ಕ್ರಿಕೆಟ್ ದೇವರು ಇಂದು ಮಧ್ಯಾಹ್ನ 2 ಗಂಟೆಗೆ ಸಮಯ ಕೋರಿದ್ದು, ಕ್ರೀಡೆಯ ಬಗ್ಗೆ ಮಾತನಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ