Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯನ್ನು ಕತ್ತೆ ಎನ್ನದೇ ಕುದುರೆ ಎನ್ನಲೇ?: ರಾಯ್ ಪ್ರಶ್ನೆ

ರಾಹುಲ್ ಗಾಂಧಿಯನ್ನು ಕತ್ತೆ ಎನ್ನದೇ ಕುದುರೆ ಎನ್ನಲೇ?: ರಾಯ್ ಪ್ರಶ್ನೆ
ರಾಯ್ಪುರ್ , ಗುರುವಾರ, 20 ಅಕ್ಟೋಬರ್ 2016 (11:52 IST)
ರಾಹುಲ್ ಗಾಂಧಿಯನ್ನು ಕತ್ತೆ ಎನ್ನದೆ ಕುದುರೆ ಎನ್ನಲಾಗುತ್ತದೆಯೇ? ಎಂದು ರಾಹುಲ್ ಗಾಂಧಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅಮಾನತಾಗಿರುವ ಕಾಂಗ್ರೆಸ್ ಬಂಡಾಯ ಶಾಸಕ ಪ್ರಶ್ನಿಸಿದ್ದಾರೆ. 

ತಮ್ಮನ್ನು ಅಮಾನತುಗೊಳಿಸಿರುವ ಕೆಡಿಸಿಕೊಳ್ಳದ ಶಾಸಕ ಆರ್.ಕೆ. ರಾಯ್ ರಾಹುಲ್ ಗಾಂಧಿ ವಿರುದ್ಧ ಮತ್ತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಪಕ್ಷದಿಂದ ಕಿತ್ತೊಗೆದರೇನಾಯಿತು, ಕತ್ತೆಯನ್ನು ನಾನು ಕುದುರೆ ಎನ್ನಲಾರೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. 
 
ಛತ್ತೀಸಗಢದ ಗುಂಡರ್‌ದೇಹಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಯ್ ಕಳೆದ ಕೆಲ ದಿನಗಳಿಂದ ರಾಹುಲ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಹೀಗಾಗಿ ಹೈ ಕಮಾಂಡ್ ಕಣ್ಣಿಗೆ ಗುರಿಯಾಗಿದ್ದರು. 
 
ಮಂಗಳವಾರ ಛತ್ತೀಸ್‌ಗಢದಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಆರ್.ಕೆ. ರಾಯ್ ರಾಹುಲ್ ಗಾಂಧಿಯವರನ್ನು ಬಹಿರಂಗವಾಗಿಯೇ ಕತ್ತೆ ಎಂದು ಜರಿದಿದ್ದರು. ಈ ಹಿನ್ನೆಲೆಯಲ್ಲಿ ರಾಯ್ ಅವರನ್ನು ಪಕ್ಷದಿಂದ ಅಮಾನತುಗೊಂಡಿದ್ದರು. 
 
ತಮ್ಮನ್ನು ಅಮಾನತುಗೊಳಿಸಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಾಸಕ, ರಾಹುಲ್ ವಿರುದ್ಧ ಮಾತನಾಡಿದರೆ ನನ್ನನ್ನು ಪಕ್ಷದಿಂದ ಹೊರಹಾಕುತ್ತಾರೆಂದು ಮೊದಲೇ ಹೇಳಿದ್ದೆ. ಹಾಗೆಂದು, ಕತ್ತೆಯನ್ನು ಕುದುರೆ ಎಂದು ಕರೆಯಲಾಗದು, ಕತ್ತೆ ಕತ್ತೆಯೇ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿಗಾಗಿ ಜೈಲು ಸೇರಿದ್ದ ಹೋರಾಟಗಾರ ಆತ್ಮಹತ್ಯೆಗೆ ಯತ್ನ