Select Your Language

Notifications

webdunia
webdunia
webdunia
webdunia

ಗಾಂಧೀಜಿ ಸಲಹೆ ಬದಿಗೊತ್ತಿದ್ದೇ ಕಾಂಗ್ರೆಸ್ ಪರಾಜಯಕ್ಕೆ ಕಾರಣವಂತೆ

ಗಾಂಧೀಜಿ ಸಲಹೆ ಬದಿಗೊತ್ತಿದ್ದೇ ಕಾಂಗ್ರೆಸ್ ಪರಾಜಯಕ್ಕೆ ಕಾರಣವಂತೆ
ಪೋರಬಂದರ್ , ಸೋಮವಾರ, 20 ಜೂನ್ 2016 (12:01 IST)
ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗ್ರಾಮಗಳ ಮತ್ತು ಬಡವರ ವಿಕಾಸಕ್ಕೆ ಆದ್ಯತೆ ನೀಡಿ ಎಂದು ಮಹಾತ್ಮಾ ಗಾಂಧಿ ನೀಡಿದ್ದ ಸಲಹೆಯನ್ನು ಬದಿಗೊತ್ತಿದ್ದರಿಂದಲೇ ಅವರಿಗೆ ಈ ಪರಿಸ್ಥಿತಿ ಬಂದಿದೆ ಎಂದಿದ್ದಾರೆ. 

 
ತಮ್ಮ ಸರ್ಕಾರದ ಎರಡನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ 'ವಿಕಾಸ ಪರ್ವ' ಮೆರವಣಿಗೆಯಲ್ಲಿ ಭಾಗವಹಿಸಿ ಮಾತನ್ನಾಡುತ್ತಿದ್ದ ಅವರು, ಮಹಾತ್ಮಾ ಗಾಂಧೀಜಿಯವರು ಗ್ರಾಮೀಣ ಮತ್ತು ವಂಚಿತರ ವಿಕಾಸಕ್ಕಾಗಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ನಮ್ಮ ಮುಂದೆ ಇಟ್ಟಿದ್ದರು. ಕಾಂಗ್ರೆಸ್ 54 ವರ್ಷ ಅಧಿಕಾರದಲ್ಲಿತ್ತು. ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದೇನು ಕಡಿಮೆ ಸಮಯವಾಗಿರಲಿಲ್ಲ. ಆದರೆ ಕಾಂಗ್ರೆಸ್ ಗಾಂಧೀಜಿ ಸಲಹೆಯನ್ನು ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಅದು ನಿಧಾನವಾಗಿ ದೇಶದ ವಿವಿಧೆಡೆಗಳಲ್ಲಿ ಅದು ಅಧಿಕಾರವನ್ನು ಕಳೆದುಕೊಳ್ಳುತ್ತಿದೆ ಎಂದು ಸಿಂಗ್ ಹೇಳಿದ್ದಾರೆ. 
 
ಮತ್ತೊಂದೆಡೆ ಗಾಂಧೀಜಿಯವರ ಸಿದ್ಧಾಂತಗಳಿಗೆ ಮಾನ್ಯತೆ ಕೊಟ್ಟಿರುವ ಎನ್‌ಡಿಎ ಸರ್ಕಾರ ಗ್ರಾಮೀಣ ಕ್ಷೇತ್ರ ಮತ್ತು ಬಡವರ ಕಲ್ಯಾಣಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ ಎಂದು ಸಿಂಗ್ ತಮ್ಮ ಸರ್ಕಾರವನ್ನು ಹೊಗಳಿಕೊಂಡಿದ್ದಾರೆ. 
 
ಈಗ ಕಾಂಗ್ರೆಸ್ ಪ್ರಭಾವ ಕರ್ನಾಟಕವನ್ನು ಹೊರತು ಪಡಿಸಿ ಪರ್ವತ ಪ್ರದೇಶಗಳಾದ ಹಿಮಾಚಲ ಪ್ರದೇಶ್, ಉತ್ತರಾಖಂಡ, ಮೇಘಾಲಯ, ಮಣಿಪುರಕ್ಕೆ ಮಾತ್ರ ಸೀಮಿತವಾಗಿದೆ ಎಂದಿದ್ದಾರೆ ಸಿಂಗ್. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯ್ಡು ಪ್ರಕಾರ 'ಮೋದಿ' ವಿಸ್ತ್ರತ ರೂಪವಿದು