ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ದೇವರು ಕೊಟ್ಟ ವರ ಪ್ರಸಾದ ಎಂದು ಮೊನ್ನೆ ತಾನೇ ಹೇಳಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಈಗ 'ಮೋದಿ' ಅರ್ಥವನ್ನು ಹೀಗೆ ವಿವರಿಸಿದ್ದಾರೆ- ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ.
ನವದೆಹಲಿಯ ರಾಜಪಥದಲ್ಲಿ ಬಾಬಾ ರಾಮದೇವ್ ಅವರು ಆಯೋಜಿಸಿದ್ದ ಯೋಗ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ನಾಯ್ಡ, ಮೋದಿ ಅವರು ಹೊಸ ಮಿಶನ್ ಪ್ರಾರಂಭಿಸಿದ್ದಾರೆ. ದೇಶದ ಜನರು ಅವರನ್ನೇ ಅನುಸರಿಸುತ್ತಿದ್ದು ಮೋದಿ ಎಂದರೆ 'ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ' ಎಂದು ಅರ್ಥ ನೀಡುತ್ತಿದ್ದಾರೆ. ಅವರು ತಮ್ಮ ಮನದ ಮಾತುಗಳನ್ನಾಡುತ್ತಿದ್ದಾರೆ ಮತ್ತು ಜನರು ಅದನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಮದೇವ್ ಬಾಬಾ ಅವರನ್ನು 'ನಿಜವಾದ ಸಂತ' ಎಂದು ಹೊಗಳಿದ ಅವರು, ಯುವಪೀಳಿಗೆಗೆ ಅವರು ಪ್ರಾಚೀನ ಕಲೆಯ ಶಿಕ್ಷಣ ನೀಡುತ್ತಿರುವುದೇನು ಚಿಕ್ಕ ಮಾತಲ್ಲ ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.