Select Your Language

Notifications

webdunia
webdunia
webdunia
webdunia

ಸರ್ಜಿಕಲ್ ಸ್ಟ್ರೈಕ್ ಸೇನೆ ಮಾಡ್ತಿರೋ ನಾಟಕ ಸ್ವಾಮೀ.. ಎಂದ ಕಾಂಗ್ರೆಸ್ ನಾಯಕ!

ಸರ್ಜಿಕಲ್ ಸ್ಟ್ರೈಕ್ ಸೇನೆ ಮಾಡ್ತಿರೋ ನಾಟಕ ಸ್ವಾಮೀ.. ಎಂದ ಕಾಂಗ್ರೆಸ್ ನಾಯಕ!
ನವದೆಹಲಿ , ಮಂಗಳವಾರ, 2 ಜನವರಿ 2018 (08:47 IST)
ನವದೆಹಲಿ: ಭಾರತೀಯ ಸೇನೆ ಪಾಕ್ ಗಡಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ನಾಟಕ ಎಂದಿದ್ದಾರೆ.
 

ಸರ್ಜಿಕಲ್ ಸ್ಟ್ರೈಕ್ ಸೇನೆಯ ನಾಟಕವಷ್ಟೇ ಎಂದು ಕಾಂಗ್ರೆಸ್ ನಾಯಕನ ಹೇಳಿಕೆ ನೀಡಿದ್ದು, ಇದಕ್ಕೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 2016 ರ ಸೆಪ್ಟೆಂಬರ್ 28,29 ರಂದು ಭಾರತೀಯ ಸೇನೆ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿತ್ತು. ಇದರಲ್ಲಿ ಪಾಕ್ ಸೈನಿಕರೂ ಸಾವನ್ನಪ್ಪಿದ್ದರು. ಅದರ ಬಗ್ಗೆ ದೇಶವೇ ಹೆಮ್ಮೆ ಪಡುತ್ತಿದ್ದರೆ ಕಾಂಗ್ರೆಸ್ ನಾಯಕ ಮಾತ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಒಂದು ವಿಷಯವಂತೂ ಸ್ಪಷ್ಟ. ಆವತ್ತು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಕೇವಲ ಡ್ರಾಮಾ, ಅದರಿಂದ ಯಾವ ಪರಿಣಾಮವೂ ಆಗಿಲ್ಲ. ನಮ್ಮ ದ್ವಿಪಕ್ಷೀಯ ನೀತಿಯ ಕುರಿತು ನಾವು ಪುನರಾಲೋಚನೆ ನಡೆಸಬೇಕಿದೆ’ ಎಂದು ದೀಕ್ಷಿತ್ ಹೇಳಿದ್ದಾರೆ.

ಇದಕ್ಕೆ ತೀವ್ರವಾಗಿ ಟೀಕಿಸಿರುವ ಬಿಜೆಪಿ, ಸಂದೀಪ್ ದೀಕ್ಷಿತ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಹುಲ್ ಗಾಂಧಿ ಬೆಳೆಸುತ್ತಿರುವ ಕೂಸು. ಇವರು ಮತ್ತೊಬ್ಬ ಮಣಿಶಂಕರ್ ಅಯ್ಯರ್ ಎಂದು ಜರೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ರಮ್ಯಾ ನಡುವೆ ನಡೆದ ಒಪ್ಪಂದ ಏನು ಗೊತ್ತಾ?!