ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್ ಗೆ ಇದೀಗ ಪಕೋಡಾ ಕೆಸರೆರಚಾಟದ ವಸ್ತುವಾಗಿದೆ. ಮೊನ್ನೆಯಷ್ಟೇ ಪ್ರಧಾನಿ ಮೋದಿ ನೀಡಿರುವ ಹೇಳಿಕೆಯೇ ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ಮೊನ್ನೆ ಈ ದೇಶದಲ್ಲಿ ಪಕೋಡಾ ಮಾರಿ ಜೀವನ ಮಾಡುವುದೂ ಒಂದು ಉದ್ಯೋಗ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ಮೋದಿ ಈ ಮೂಲಕ ಪಕೋಡಾ ಮಾಡಿ ಜೀವನ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ವಿವಾದ ಸೃಷ್ಟಿಸಿದ್ದರು.
ಆದರೆ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪಕೋಡಾ ಮಾರುವುದು ಉದ್ಯೋಗ ಎಂದಾದರೆ ಭಿಕ್ಷೆ ಬೇಡುವುದೂ ಉದ್ಯೋಗವೇ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಕಾಂಗ್ರೆಸ್ ಈ ಮೂಲಕ ಬಡವರಿಗೆ ಅವಮಾನ ಮಾಡಿದೆ ಎಂದಿದೆ. ಅಂತೂ ಪಕೋಡಾ ವಿಷಯ ರಾಜಕೀಯ ದಾಳವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ