Select Your Language

Notifications

webdunia
webdunia
webdunia
webdunia

ಟಿಕೆಟ್ ಬೇಕಿದ್ದರೆ ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಿ: ಪಂಜಾಬ್ ಕಾಂಗ್ರೆಸ್

Congress
ಚಂದೀಘಡ , ಶುಕ್ರವಾರ, 8 ಜುಲೈ 2016 (18:31 IST)
ಚುನಾವಣೆಯಲ್ಲಿ ನಿಮಗೆ ಕಾಂಗ್ರೆಸ್ ಟಿಕೆಟ್ ಬೇಕೆ? ಹಾಗಾದರೆ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಇಬ್ಬರು ಮತದಾರರ ಪರಿಚಯ ನಿಮಗಿರಬೇಕು. ಪಂಜಾಬ್ ಚುನಾವಣೆಗೆ ತಮ್ಮ ಪಕ್ಷದಿಂದ ಟಿಕೆಟ್ ಬಯಸುವ ಅಭ್ಯರ್ಥಿಗೆ ಕಾಂಗ್ರೆಸ್ ವಿಧಿಸಿರುವ ನಿಯಮವಿದು.

ನಿಮಗೆ ನಮ್ಮ ಪಕ್ಷದಿಂದ ಟಿಕೆಟ್ ಬೇಕಂದಿದ್ದರೆ ನೀವು ಒಂದು ಅರ್ಜಿಯನ್ನು ತುಂಬಬೇಕು. ಅದರಲ್ಲಿ ನೀವು ಕಣಕ್ಕಿಳಿಯ ಬಯಸುವ ಪ್ರತಿ ಬೂತ್‌ನಿಂದ ಕನಿಷ್ಠ ಇಬ್ಬರು ಮತದಾರರ ವಿವರ ನೀಡಬೇಕು. ಜತೆಗೆ ಅವರ ವೋಟರ್ ಕಾರ್ಡ್ ಪ್ರತಿಯನ್ನು ಸಹ ಲಗತ್ತಿಸಿರಬೇಕು ಎಂದು ಕಾಂಗ್ರೆಸ್ ಸೂಚಿಸಿದೆ. 
 
ಈ ಅರ್ಜಿಯನ್ನು ಭರ್ತಿ ಮಾಡಿ ಆಗಸ್ಟ್ 15ರೊಳಗೆ ಚಂದೀಘಡದಲ್ಲಿರುವ ಪಕ್ಷದ ಕಚೇರಿಗೆ ನೀಡಬೇಕು. ಅಲ್ಲಿಂದ ಅದನ್ನು ನವದೆಹಲಿಗೆ ಕಳುಹಿಸಲಾಗುವುದು. ಚುನಾವಣಾ ಕಣಕ್ಕಿಳಿದು, ಗೆಲ್ಲಲ್ಲು ಗಂಭೀರ ಪ್ರಯತ್ನ ನಡೆಸುವವರು ಅರ್ಜಿ ಸಲ್ಲಿಸಲಿ ಎಂಬುದು ನಮ್ಮ ಈ ನಿಯಮದ ಉದ್ದೇಶ. ಅವರ ಕ್ಷೇತ್ರದಲ್ಲಿ ಎಷ್ಟು ಮತಗಟ್ಟೆಗಳಿವೆ ಎಂಬುದನ್ನು ಸಹ ತಿಳಿಯದೇ, ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಸುಮ್ಮನೆ ಕಣಕ್ಕಿಳಿಯುವುದು ಎಷ್ಟರ ಮಟ್ಟಿಗೆ ಸೂಕ್ತ. ಹೀಗಾಗಿ ಈ ನಿಯಮ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯ ಆರೋಪ; ಮತ್ತೊಬ್ಬ ಆಪ್ ಶಾಸಕನ ಬಂಧನ