Select Your Language

Notifications

webdunia
webdunia
webdunia
webdunia

ಲೈಂಗಿಕ ದೌರ್ಜನ್ಯ ಆರೋಪ; ಮತ್ತೊಬ್ಬ ಆಪ್ ಶಾಸಕನ ಬಂಧನ

AAP MLA
ನವದೆಹಲಿ , ಶುಕ್ರವಾರ, 8 ಜುಲೈ 2016 (18:18 IST)
ಮಹಿಳೆಯ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆಪ್ ಶಾಸಕ ದಿನೇಶ್ ಮೋಹನಿಯಾ ವಿರುದ್ಧ ಆರೋಪ ಕೇಳಿ ಬಂದ 15 ದಿನದ ಬಳಿಕ ಈಗ ಮತ್ತೊಬ್ಬ ಆಪ್ ಶಾಸಕ ಪ್ರಕಾಶ್ ಜರ್ವಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. 
ಜರ್ವಾಲ್ ವಿರುದ್ಧ ಮಹಿಳೆಯೋರ್ವರು ಗ್ರೇಟರ್ ಕೈಲಾಸ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಜರ್ವಾಲ್ ಕೇವಲ ಅನುಚಿತವಾಗಿ ನಡೆದುಕೊಂಡಿದ್ದಷ್ಟೇ ಅಲ್ಲ, ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಎಫ್ಐಆರ್ ದಾಖಲಿಸುವ ಮೊದಲು ಪೀಡಿತೆ ಉಪರಾಜ್ಯಪಾಲ ಮತ್ತು ದೆಹಲಿ ಪೊಲೀಸ್ ಸಿಪಿಯವರನ್ನು ಸಹ ಸಂಪರ್ಕಿಸಿದ್ದಳು ಎಂದು ಮೂಲಗಳು ತಿಳಿಸಿವೆ.
 
ಜರ್ವಾಲ್ ವಿರುದ್ಧ ಐಪಿಸಿ ವಿಭಾಗ 354, 506, 509 ಮತ್ತು 34 ರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. 
 
ಕಳೆದ ಕೆಲ ತಿಂಗಳಿಂದ ಆಪ್ ಪಕ್ಷದ ಹಲವು ನಾಯಕರು ವಿವಾದಕ್ಕೊಳಗಾಗಿದ್ದು ಪಕ್ಷ ಇಕ್ಕಟ್ಟಿಗೆ ಸಿಲುಕಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿಲ್ಲ, ಬ್ಲ್ಯಾಕ್‌ ಮಾಡೋಲ್ಲ: ಉದ್ಭವ್ ಠಾಕ್ರೆ