ಚೆನ್ನೈ : ಕೊರೊನಾ ರೂಪಾಂತರ ತಳಿಯ ಓಮಿಕ್ರಾನ್ ಸೋಂಕು ಎಲ್ಲೆಡೆ ಅತೀ ವೇಗವಾಗಿ ಹರಡುತ್ತಿರುವ ಹಿನ್ನೆಲೆ ತಮಿಳುನಾಡಿನಲ್ಲಿ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಲು ವೈದ್ಯರು ಒತ್ತಾಯ ಮಾಡಿದ್ದಾರೆ.
ದಿನೇ ದಿನೇ ಕೊರೊನಾ ಸೋಂಕು ಅತೀ ವೇಗವಾಗಿ ಎಲ್ಲೆಡೆ ಹರಡುತ್ತಿದೆ. ಈ ಹಿನ್ನೆಲೆ ತಮಿಳುನಾಡಿನ ಸರ್ಕಾರಿ ವೈದ್ಯರ ಸಂಘವು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಆರಂಭಿಸಲು ರಾಜ್ಯದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬಳಿ ಮನವಿ ಮಾಡಿದ್ದಾರೆ.
ಶಾಲಾ- ಕಾಲೇಜುಗಳನ್ನು ಮುಚ್ಚುವ ಜೊತೆಗೆ ಮಾಸ್ಕ್ ಧರಿಸುವುದರ ಮೇಲೆ ಕಟ್ಟು ನಿಟ್ಟಿನ ನಿಗಾ ಇಡಬೇಕು.
ಕೊರೊನಾ ರೂಪಾಂತರದ ಓಮಿಕ್ರಾನ್ ನಾಲ್ಕು ಪಟ್ಟು ವೇಗವಾಗಿ ಹರಡುವುದರಿಂದ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಮಾಡುವುದು ಉತ್ತಮ ಎಂದು ವೈದ್ಯ ಸಂಘದ ಅಧ್ಯಕ್ಷ ಕೆ.ಸೆಂಥಿಲ್ ಹೇಳಿದ್ದಾರೆ.