ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕೆಂದು ತೀರ್ಮಾನ..!

geetha
ಶನಿವಾರ, 3 ಫೆಬ್ರವರಿ 2024 (19:01 IST)
ಅಸ್ಸಾಂ :ಭಾರತ್‌ ಜೋಡೊ ನ್ಯಾಯ್‌ ಯಾತ್ರಾದಲ್ಲಿ ಪಾಲ್ಗೊಂಡು ಜನರನ್ನುದ್ದೇಶಿಸಿ ಮಾತನಾಡಿದ  ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂದಿ ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕೆಂದು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ನಮ್ಮ ಯುದ್ದವು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜನರ ಹೃದಯದಲ್ಲಿರುವ ದ್ವೇಷದ ವಿರುದ್ದವಾಗಿದೆ ಎಂದು ನುಡಿದ ರಾಹುಲ್‌ ಗಾಂಧಿ, ಅವರು ದ್ವೇಷದ ಮತ್ತು ಬೆದರಿಕೆಯಿಂದ ರಾಜಕಾರಣ ನಡೆಸುತ್ತಿದ್ದಾರೆ.  ಇದನ್ನು ಹೋಗಲಾಡಿಸಲು ನಾವು ಮಣಿಪುರದಿಂದ ಆರಂಭಿಸಿ ಜಾರ್ಖಂಡ್‌ ವರೆಗೆ ಯಾತ್ರೆ ನಡೆಸುತ್ತಿದ್ದೇವೆ  ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜನರು ದೇಶದಲ್ಲಿ ದ್ವೇಷದ ದಳ್ಳುರಿಯನ್ನು ಹಬ್ಬಿಸುತ್ತಿದ್ದಾರೆ. ಇದಕ್ಕಾಗಿ ನಾವು ಭಾರತ್‌ ಜೋಡೋ ಯಾತ್ರೆ ಪ್ರಾರಂಭಿಸಿದೆವು ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂದಿ ಹೇಳಿದ್ದಾರೆ. 

ಇದೇ ವೇಳೆ ಜಾರ್ಖಂಡ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈ ಪಿತೂರಿಯನ್ನು ಜನರು ವಿಫಲಗೊಳಿಸಿದ್ದಾರೆ. ನಾವು ಬಿಜೆಪಿಗೆ ಯಾವ ಕಾರಣಕ್ಕೂ ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಪಕ್ಷ ನಾಯಕರು ಮಾತನಾಡುವಾಗ ಅದನ್ನು ಕೇಳುವ ವ್ಯವಧಾನವೂ ಇಲ್ಲ: ಬಿವೈ ವಿಜಯೇಂದ್ರ

UNESCO ಪಟ್ಟಿಗೆ ಸೇರ್ಪಡೆಗೊಂಡ ದೀಪಾವಳಿ, ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯ,ಶ್ವೇತಪತ್ರ ಬಿಡುಗಡೆ ಮಾಡಲಿ: ಆರ್‌.ಅಶೋಕ

ಮಮತಾ ಬ್ಯಾನರ್ಜಿ ತಲೆನೋವಾಗಲಿದೆ ಹುಮಾಯೂನ್ ಹೊಸ ನಡೆ

ಗೋವಾ ಪಬ್ ದುರಂತ: ಬೆಂಗಳೂರಿನ ಪಬ್‌ಗಳಲ್ಲಿ ಬಿಗಿಗೊಳಿಸಿದ ಸುರಕ್ಷತಾ ಕ್ರಮ

ಮುಂದಿನ ಸುದ್ದಿ
Show comments