Publish Date: Tue, 11 Apr 2017 (05:32 IST)
Updated Date: Tue, 11 Apr 2017 (05:34 IST)
ನವದೆಹಲಿ: ಇತ್ತೀಚೆಗಷ್ಟೇ ಪಂಜಾಬ್ ಚುನಾವಣೆಯಲ್ಲಿ ಗೆದ್ದು, ಮಂತ್ರಿಯಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸುತ್ತಿರುವ ಸಿದು, ಡಬಲ್ ಮೀನಿಂಗ್ ಜೋಕ್ ಸಿಡಿಸಿದ್ದಕ್ಕೆ ಪ್ರಕರಣ ದಾಖಲಾಗಿದೆ. ಪಂಜಾಬ್ ನ ಹೈಕೋರ್ಟ್ ವಕೀಲ ಎಚ್.ಸಿ. ಅರೋರಾ ಎಂಬವರು ಸಿದು ವಿರುದ್ಧ ಪಂಜಾಬ್ ಸರ್ಕಾರಕ್ಕೆ ದೂರು ನೀಡಿದ್ದಾರೆ.
ಸಚಿವರಾದ ಮೇಲೆ ಸಿದು ಈ ಶೋನಲ್ಲಿ ಭಾಗವಹಿಸುವುದರ ಬಗ್ಗೆ ಹಲವು ಚರ್ಚೆಗಳಾಗಿತ್ತು. ಕೊನೆಗೆ ಸ್ವತಃ ಸಿಎಂ ಅಮರೀಂದರ್ ಸಿದುಗೆ ಹಸಿರು ನಿಶಾನೆ ತೋರಿದ್ದರು. ಆದರೆ ಇದರಲ್ಲಿ ಸಿದು ಕುಟುಂಬ ಸಮೇತ ವೀಕ್ಷಿಸಲು ಮುಜುಗರ ತರುವಂತಹ ಮಾತನಾಡಿದ್ದಾರೆ ಎಂದು ಅರೋರಾ ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ