Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿರುವ ನಿರಾಶ್ರಿತರನ್ನು ಪೌರತ್ವ ವಂಚಿತರಾಗಲು ಬಿಡುವುದಿಲ್ಲ-ಸಿಎಂ ಮಮತಾ ಬ್ಯಾನರ್ಜಿ

ರಾಜ್ಯದಲ್ಲಿರುವ ನಿರಾಶ್ರಿತರನ್ನು ಪೌರತ್ವ ವಂಚಿತರಾಗಲು ಬಿಡುವುದಿಲ್ಲ-ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತ್ತಾ , ಬುಧವಾರ, 4 ಮಾರ್ಚ್ 2020 (09:50 IST)
ಕೋಲ್ಕತ್ತಾ: ರಾಜ್ಯದಲ್ಲಿರುವ ನಿರಾಶ್ರಿತರನ್ನು ಪೌರತ್ವ ವಂಚಿತರಾಗಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಬಗ್ಗೆ ಸಭೆಯೊಂದರಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಿಂದ ವಲಸೆ ಬಂದು ಪಶ್ಚಿಮ ಬಂಗಾಳದಲ್ಲಿ ನೆಲೆಸಿ, ಮತದಾನ ಮಾಡಿರುವ ಎಲ್ಲರೂ ಭಾರತೀಯ ಪ್ರಜೆಗಳಾದ ಕಾರಣ ಅವರು ಪೌರತ್ವಕ್ಕೆ ಅರ್ಜಿ ಹಾಕುವ ಅವಶ್ಯಕತೆ ಇಲ್ಲ . ನೀವುಗಳು ಹಲವಾರು ವರ್ಷಗಳಿಂದ ಇಲ್ಲಿ ಮತದಾನ ಮಾಡುತ್ತಾ ಬಂದಿದ್ದೀರಾ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುತ್ತಿದ್ದೀರಾ. ಅವರು ಈಗ ನೀವು ಭಾರತೀಯರಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ನಂಬಬೇಡಿ.


ನಾನು ಒಬ್ಬ ವ್ಯಕ್ತಿಯನ್ನು ಕೂಡ ಬಂಗಾಳದಿಂದ ಹೊರ ಹಾಕಲು ಬಿಡುವುದಿಲ್ಲ, ರಾಜ್ಯದಲ್ಲಿರುವ ನಿರಾಶ್ರಿತರನ್ನು ಪೌರತ್ವ ವಂಚಿತರಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೂ ಕಾಲಿಟ್ಟ ಕೊರೊನಾ ವೈರಸ್; ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಕಿಡಿ