Publish Date: Sat, 14 Oct 2017 (09:51 IST)
Updated Date: Sat, 14 Oct 2017 (09:52 IST)
ನವದೆಹಲಿ: ದೆಹಲಿ ಸಚಿವಾಲಯದ ಹೊರಗೆ ನಿಲ್ಲಿಸಿದ್ದ ಸಿಎಂ ಕೇಜ್ರಿವಾಲ್ ಅವರಿಗೆ ಸೇರಿದ ವ್ಯಾಗನ್ ಆರ್ ಕಾರು ಗಾಝಿಯಾಬಾದ್ ನಲ್ಲಿ ಪತ್ತೆಯಾಗಿದೆ.
ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಕೇಜ್ರಿವಾಲ್ ಇದೇ ಕಾರು ಬಳಸುತ್ತಿದ್ದರು. ತಮ್ಮ ಕಾರು ಕಳ್ಳತನವಾದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದ ಕೇಜ್ರಿವಾಲ್ ಸಚಿವಾಲಯದ ಹೊರಗೇ ಈ ರೀತಿಯ ಘಟನೆ ನಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಈ ಕಾರು ಪತ್ತೆ ಮಾಡಿಕೊಟ್ಟವರಿಗೆ ಆಮ್ ಆದ್ಮಿ ಪಕ್ಷ ಬಹುಮಾನವನ್ನೂ ಘೋಷಿಸಿತ್ತು. ಇದೀಗ ಸಿಸಿಟಿವಿ ಫೂಟೇಜ್ ಆಧರಿಸಿ ಕಳ್ಳನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ