ನವದೆಹಲಿ: ದೆಹಲಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಕಳೆಗಟ್ಟುತ್ತಿದೆ. ಪ್ರಚಾರಕ್ಕೆಂದು ಹೋಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮೆದುರು ಪ್ರಧಾನಿ ಮೋದಿಗೆ ಜಯಕಾರ ಹಾಕಿದವರನ್ನು ಹುಚ್ಚರು ಎಂದಿದ್ದಾರೆ.
‘ಮೋದಿ ಮೋದಿ ಎಂದು ಜಯಕಾರ ಹಾಕಿದರೆ ನಿಮ್ಮ ಹಸಿವು ನೀಗದು. ಕೆಲವು ಜನ ನಿಜಕ್ಕೂ ಹುಚ್ಚರಾಗಿದ್ದಾರೆ’ ಎಂದರು. ಕೆಲವು ಯುವಕರ ಗುಂಪು ಕೆಜ್ರಿವಾಲ್ ಭಾಷಣ ಮಾಡಲು ಬಾಯಿ ತೆರೆಯುತ್ತಿದ್ದಂತೆ ಮೋದಿಗೆ ಜೈಕಾರ ಹಾಕಿತ್ತು.
ಇದರಿಂದ ಕೊಂಚ ವಿಚಲಿತರಾದ ಸಿಎಂ ಸಾಹೇಬರು ವ್ಯಂಗ್ಯ ಭರಿತ ಧಾಟಿಯಲ್ಲಿ ಉತ್ತರಿಸಿದ್ದಾರೆ. ಹಾಗಿದ್ದರೂ ಯುವಕರ ಗುಂಪು ಮೋದಿಗೆ ಜೈಕಾರ ಹಾಕುವುದನ್ನು ನಿಲ್ಲಿಸಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ