Select Your Language

Notifications

webdunia
webdunia
webdunia
webdunia

ಶುಕ್ರವಾರದವರೆಗೆ ಮಳೆಯ ಭೀತಿ?

ಹವಾಮಾನ
ಬೆಂಗಳೂರು: ಚೆನ್ನೈ ಸೇರಿದಂತೆ ಕರಾವಳಿಯ ಕೆಲವು ನಗರಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

 
ಬಂಗಾಳ ಕೊಲ್ಲಿಯಲ್ಲಿ ಬಿರುಗಾಳಿ ಏಳುವ ಸಾಧ್ಯತೆಯಿರುವುದರಿಂದ ವಾತಾವರಣದಲ್ಲಿ ಈ ಬದಲಾವಣೆಯಾಗಲಿದ್ದು, ಇದರಿಂದಾಗಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣ ಎರಡರಿಂದ ಮೂರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಶುಕ್ರವಾರದವರೆಗೆ ಚೆನ್ನೈ ಮತ್ತಿತರೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎರಡು ವಾರಗಳ ಹಿಂದೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಮತ್ತೆ ಮೋಡ ಕವಿದ ವಾತಾವರಣ ಜನರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಧಾರ ವಿರುದ್ಧದ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಪೀಠ: ಸುಪ್ರೀಂಕೋರ್ಟ್