ನಾನೊಬ್ಬ ಫಕೀರ ನನ್ನನ್ನು ಯಾರು ಏನು ಮಾಡಲಾಗಲ್ಲ. ಭಾರತದ ನಾಗರಿಕರೇ ನನಗೆ ಹೈಕಮಾಂಡ್, ಯಾರು ಏನೇ ಅಂದರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದರು.
ಭ್ರಷ್ಟಾಚಾರದ ವಿರುದ್ಧದ ಹೋರಾಟ ನಿರಂತರ. ಭ್ರಷ್ಟಾಚಾರಿಗಳು ನನಗೆ ಏನು ತಾನೇ ಮಾಡಲು ಸಾಧ್ಯ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ. ನನ್ನ ಹೋರಾಟವನ್ನೇ ತಪ್ಪು ಎಂದು ಕೆಲವರು ಹೇಳಿದ್ದಾರೆ. ಆದರೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶದಲ್ಲಿನ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಿಯೇ ಸಿದ್ದ ಎಂದು ಘೋಷಿಸಿದರು.
ಭ್ರಷ್ಟಾಚಾರಿಗಳು ನನಗೆ ಏನು ತಾನೇ ಮಾಡಲು ಸಾಧ್ಯ? ಜನಧನ ಖಾತೆ ದುರ್ಬಳಕೆ ಮಾಡಿಕೊಳ್ಳಲು ಭ್ರಷ್ಟರ ಯತ್ನ.ದೇಶದ ಸಮಸ್ಯೆ ನಿವಾರಿಸಲೆಂದೇ ನಾನು ಇರುವುದು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದರು.
ದೇಶದ್ಲಲಿರುವ ಭ್ರಷ್ಟಾಚಾರ ತೊಲಗಬೇಡವೇ ನೀವೆ ಹೇಳಿ? ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿ ನಿಂತಿದ್ದೇನೆ. ಭ್ರಷ್ಟಾಚಾರಿಗಳೇ ಎಚ್ಚರದಿಂದಿರಿ ನಿಮಗೆ ತೊಂದರೆ ತಪ್ಪಿದ್ದಲ್ಲ ಎಂದು ಕಠಿಣ ಸಂದೇಶ ರವಾನಿಸಿದರು.
ಕಪ್ಪು ಹಣ ಹೊಂದಿವರು ಬಡವರ ಹತ್ತಿರ ನೆರವು ಕೇಳುವ ಸ್ಥಿತಿ ಎದುರಾಗಿದೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಿಗಳಿಗೆ ನೆರವು ನೀಡಬೇಡಿ ಎಂದು ದೇಶದ ಜನತೆಗೆ ಕರೆ ನೀಡಿದರು.
ಕಪ್ಪು ಹಣದ ವಿರುದ್ಧ ಕ್ರಮ ಕೈಗೊಂಡಿಲ್ಲ ಯುದ್ಧ ಸಾರಿದ್ದೇವೆ. ಕಪ್ಪು ಹಣದ ವಿರುದ್ಧ ಕ್ರಮ ಕೈಗೊಂಡರೆ ಅಪರಾಧನಾ? ಭ್ರಷ್ಟರ ಎಲ್ಲಾ ದಾರಿಗಳನ್ನು ಬಂದ್ ಮಾಡಿಯೇ ತೀರುತ್ತೇನೆ ಎಂದು ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಗುಡುಗಿದ್ದಾರೆ.