Select Your Language

Notifications

webdunia
webdunia
webdunia
webdunia

ಚಿತ್ತೂರು ಬಸ್ ದುರಂತ! ಮೃತರ ಕುಟುಂಬಕ್ಕೆ ಪರಿಹಾರ

ಚಿತ್ತೂರು ಬಸ್ ದುರಂತ! ಮೃತರ ಕುಟುಂಬಕ್ಕೆ ಪರಿಹಾರ
ಅಮರಾವತಿ , ಭಾನುವಾರ, 27 ಮಾರ್ಚ್ 2022 (13:25 IST)
ಅಮರಾವತಿ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದ ಬಸ್ ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ ದುರಂತ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಅಲ್ಲದೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಘಟನೆಯಲ್ಲಿ 45 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡುವುದಾಗಿ ಮೋದಿ ತಿಳಿಸಿದ್ದಾರೆ. ಶನಿವಾರ ರಾತ್ರಿ 11.30ರ ಸುಮಾರಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಭಾಕರಪೇಟ್ನಲ್ಲಿ ಬಸ್ಸೊಂದು ಕಂದಕ್ಕೆ ಬಿದ್ದಿತ್ತು. ಘಟನೆಯಲ್ಲಿ 7 ಮಂದಿ ಮೃತಪಟ್ಟರೆ 45 ಮಂದಿ ಗಾಯಗೊಂಡಿದ್ದಾರೆ.

ಮದುವೆ ಸಮಾರಂಭಕ್ಕೆಂದು ಖಾಸಗಿ ಬಸ್ ಅನಂತಪುರ ಜಿಲ್ಲೆಯ ಧರ್ಮಾವರಂನಿಂದ ಚಿತ್ತೂರಿನ ನಗರಿ ಬಳಿಯ ಗ್ರಾಮಕ್ಕೆ 52 ಮಂದಿಯನ್ನು ಕರೆದುಕೊಂಡು ಹೋಗುತ್ತಿತ್ತು. ಘಾಟ್ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಸ್ 50 ಅಡಿ ಆಳದ ಪ್ರಪಾತಕ್ಕೆ ಉರುಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಹಿಳಾ ಸ್ಪೀಕರ್ ರಿತು ಖಂಡೂರಿ ಆಯ್ಕೆ