Select Your Language

Notifications

webdunia
webdunia
webdunia
webdunia

ಶಾಕಿಂಗ್‌: ಕಾಶ್ಮೀರದಲ್ಲಿ ಚೀನಾ ಧ್ವಜ ವಶ

ಶಾಕಿಂಗ್‌: ಕಾಶ್ಮೀರದಲ್ಲಿ ಚೀನಾ ಧ್ವಜ ವಶ
ಶ್ರೀನಗರ , ಬುಧವಾರ, 19 ಅಕ್ಟೋಬರ್ 2016 (08:48 IST)
ಜಮ್ಮು ಮತ್ತು ಕಾಶ್ಮೀರದ  ಬಾರಮುಲ್ಲಾ ಜಿಲ್ಲೆಯ ಹಳೆಯ ಪಟ್ಟಣದಲ್ಲಿ ದಾಳಿ ನಡೆಸಿ 44 ಉಗ್ರರನ್ನು ಬಂಧಿಸಲಾಗಿದೆ. 
ಖಚಿತ ಮೂಲಗಳ ಪ್ರಕಾರ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾದ 700 ಮನೆಗಳ ಮೇಲೆ ದಾಳಿ ನಡೆಸಿ 44 ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
 
ಸೋಮವಾರ ಸುಮಾರು 12 ಗಂಟೆ ಕಾಲ  ಸೇನೆ, ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದು ಉಗ್ರರ ಬಂಧನದ ಜತೆಗೆ ರಾಷ್ಟ್ರವಿರೋಧಿ ಸಾಹಿತ್ಯ, ಅಕ್ರಮ ಶಸ್ತ್ರಾಸ್ತ್ರಗಳ ಜತೆ ಚೀನಿ ಹಾಗೂ ಪಾಕ್ ಧ್ವಜಗಳು ಪತ್ತೆಯಾಗಿವೆ.
 
ಶಾಕಿಂಗ್ ಸಂಗತಿಯೆಂದರೆ ಉಗ್ರರ ಅಡಗುತಾಣಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದ ಧ್ವಜಗಳು ಸಹ ಪತ್ತೆಯಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹೈಪ್ರೋಫೈಲ್ ಸೆಕ್ಸ್ ರಾಕೆಟ್: ವಿದೇಶಿ ಕಾಲ್‌ಗರ್ಲ್‌ಗಳು ಸೇರಿದಂತೆ ಐವರ ಅರೆಸ್ಟ್