Select Your Language

Notifications

webdunia
webdunia
webdunia
webdunia

ಹೈಪ್ರೋಫೈಲ್ ಸೆಕ್ಸ್ ರಾಕೆಟ್: ವಿದೇಶಿ ಕಾಲ್‌ಗರ್ಲ್‌ಗಳು ಸೇರಿದಂತೆ ಐವರ ಅರೆಸ್ಟ್

ಹೈಪ್ರೋಫೈಲ್ ಸೆಕ್ಸ್ ರಾಕೆಟ್: ವಿದೇಶಿ ಕಾಲ್‌ಗರ್ಲ್‌ಗಳು ಸೇರಿದಂತೆ ಐವರ ಅರೆಸ್ಟ್
ಗುರ್ಗಾಂವ್ , ಮಂಗಳವಾರ, 18 ಅಕ್ಟೋಬರ್ 2016 (20:13 IST)
ಗುರ್ಗಾಂವ್‌ನ ಸೆಕ್ಟರ್ 51 ರಲ್ಲಿ ಹೈ ಪ್ರೋಫೈಲ್ ಸೆಕ್ಸ್ ರಾಕೆಟ್ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಐವರು ಯುವತಿಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ. 
 
ಹರಿಯಾಣಾದ ಗುರ್ಗಾಂವ್ ಸೆಕ್ಟರ್ 51 ರಲ್ಲಿ ಮೊದಲಿನಿಂದಲೂ ಹೈಪ್ರೋಫೈಲ್ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಮಾಹಿತಿಗಳಿದ್ದವು. ಆದರೆ, ಪೊಲೀಸರು ದಾಳಿ ಮಾಡಿರಲಿಲ್ಲ. ಇಂದಿನ ದಾಳಿಯಲ್ಲಿ ಇಬ್ಬರು ವಿದೇಶಿ ಯುವತಿಯರು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಬಂಧಿತ ಯುವತಿಯರಲ್ಲಿ ಮೂವರು ದೆಹಲಿ ಮೂಲದವರಾಗಿದ್ದು, ಇತರ ಇಬ್ಬರು ವಿದೇಶಿ ಯುವತಿಯರಾಗಿದ್ದಾರೆ.
 
ಗಮನಾರ್ಹ ವಿಷಯವೆಂದರೆ, ವಾಟ್ಸಪ್‌ ಮೂಲಕ ಯುವತಿಯರ ಚಿತ್ರಗಳನ್ನು ಕಳುಹಿಸಿ ರೇಟ್ ಕೂಡಾ ವಾಟ್ಸಪ್‌ನಲ್ಲಿಯೇ ಫಿಕ್ಸ್ ಮಾಡಲಾಗುತ್ತಿತ್ತಂತೆ. ಪಿಂಪ್‌ಗಳು ತಮ್ಮ ತಮ್ಮ ಮೊಬೈಲ್‌ನಲ್ಲಿ ಕಾಲ್‌ಗರ್ಲ್‌ಗಳ ಭಾವಚಿತ್ರಗಳು ಮತ್ತು ಅವರ ರೇಟ್‌ಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
 
ಸೆಕ್ಸ್ ರಾಕೆಟ್ ಅಡ್ಡೆಯ ಮೇಲೆ ನಡೆದ ಪೊಲೀಸರ ದಾಳಿಯಲ್ಲಿ 10 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿದೇಶಿ ಯುವತಿಯರು ಪಾಸ್‌ಪೋರ್ಟ್ ಕೂಡಾ ಹೊಂದಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಲಾಶಯಗಳಲ್ಲಿ ನೀರಿಲ್ಲ, ಬಿಡೋದೆಲ್ಲಿಂದ ಬಂತು : ಸಿಎಂ