ಔರಂಗದಾಬಾದ್: ಸಹಾಯ ಮಾಡುವ ನೆಪದಲ್ಲಿ ವಿವಾಹಿತ ಮಹಿಳೆ ಮೇಲೆ ಸ್ನೇಹಿತನೇ ಅತ್ಯಾಚಾರವೆಸಗಿದ ಘಟನೆ ಔರಂಗದಾಬಾದ್ ನಲ್ಲಿ ನಡೆದಿದೆ.
ಮಹಿಳೆಯ ಪತಿ ಮೂರು ವರ್ಷಗಳಿಂದ ಜೈಲುವಾಸಿಯಾಗಿದ್ದು, ಆತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತೆರಳಲು ಹೊರಟಿದ್ದಾಗ ಡ್ರಾಪ್ ಕೊಡುವ ನೆಪದಲ್ಲಿ ಬಂದ ಬಾಲ್ಯ ಸ್ನೇಹಿತ ಆಕೆಗೆ ಮತ್ತು ಬರಿಸುವ ಔಷಧ ಹಾಕಿದ ಪಾನೀಯ ಕೊಟ್ಟು ಅತ್ಯಾಚಾರವೆಸಗಿದ್ದಾನೆ. ಜತೆಗೆ ಮಹಿಳೆಯ ಮಗುವಿಗೂ ನೋಡಿ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ.
ಎಚ್ಚರವಾದಾಗ ತನ್ನ ಮೇಲೆ ನಡೆದ ಅತ್ಯಾಚಾರ ಮಹಿಳೆಗೆ ಗೊತ್ತಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆ ಮತ್ತು ಆಕೆಯ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.