ತುಂಬಾ ಪಿಝಾ ತಿನ್ನಬೇಕು ಎಂದ ಚಾನು..! ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

Webdunia
ಮಂಗಳವಾರ, 27 ಜುಲೈ 2021 (14:01 IST)
ನನಗೆ ಮೊದಲು ಪಿಝಾ ತಿನ್ನಬೇಕು. ಪಿಝಾ ತಿನ್ನದೆ ಬಹಳಷ್ಟು ಕಾಲವಾಯ್ತು.. ಇವತ್ತು ಹೆಚ್ಚು ಪಿಝಾ ತಿನ್ನಬೇಕು ಎಂದು ಚಾನು ಹೇಳಿದ್ದೇ ತಡ, ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್
ಇಡೀ ದೇಶಕ್ಕೆ ಖುಷಿ ತರಬೇಕಾದರೆ ಮೀರಾಬಾಯಿ ಚಾನು ಅವರಂಥ ಅಥ್ಲೀಟ್ಗಳು ಬಹಳಷ್ಟು ವಿಚಾರದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಇವುಗಳಲ್ಲಿ ಆಹಾರವೂ ಒಂದು. ಎಷ್ಟೇ ಇಷ್ಟವಿದ್ದರೂ ತಮ್ಮ ನೆಚ್ಚಿನ ಆಹಾರ ತಿನ್ನುವ ಹಾಗಿರುವುದಿಲ್ಲ.

 

ಡಯೆಟ್ ಫಾಲೋ ಮಾಡಲೇಬೇಕಾಗುತ್ತದೆ.
ಬೆಳ್ಳಿ ಪದಕ ಗೆದ್ದು ಭಾರತೀಯರಿಗೆ ಹೆಮ್ಮೆ ತಂದ ಮೀರಾಬಾಯಿ ಚಾನು ಅವರ ಚಿಕ್ಕ ಆಸೆ ಏನಿತ್ತು ಗೊತ್ತಾ ? ಒಲಿಂಪಿಕ್ಸ್ನಲ್ಲಿ ಬೆಳ್ಳಿಗೆದ್ದ ಚಾನುಗೆ ಪಿಝಾ ತಿನ್ನೋಕೆ ಭಾರೀ ಆಸೆ ಆಗಿದೆ. ಭಾರತಕ್ಕೆ ಮರಳಿದ್ದೇ, ಬಹಳಷ್ಟು ದಿನದಿಂದ ಪಿಝಾ ತಿಂದಿಲ್ಲ, ಇವತ್ತು ಪಿಝಾ ತಿನ್ನಬೇಕು. ಸ್ವಲ್ಪ ಹೆಚ್ಚೇ ತಿನ್ನಬೇಕು ಎಂದು ಹೇಳಿದ್ದಾರೆ.
 ಫನ್ನಿ ಅನಿಸಬಹುದು. ಆದರೆ ತಮ್ಮ ನೆಚ್ಚಿನ ಆಹಾರವನ್ನು ಬಹಳ ದೀರ್ಘ ಸಮಯಕ್ಕೆ ತ್ಯಜಿಸುವುದು ಎಷ್ಟು ಕಷ್ಟ ಅಲ್ಲವೇ.. ಚಾನು ಮಿಸ್ ಮಾಡ್ಕೊಂಡಿದ್ದು, ಟೇಸ್ಟಿ ಪಿಝಾವನ್ನು. ಮೀರಾಬಾಯಿಗೆ ಶುಭಾಶಯ ತಿಳಿಸಿದ ಡೊಮಿನೊಸ್ ಅವರಿಗೆ ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದೆ.
 ಡೊಮಿನೊಸ್ ಇಂಡಿಯಾ ಬೆಳ್ಳಿ ಪದಕ ವಿಜೇತ ಮೀರಾಬಾಯಿ ಚಾನು ಅವರಿಗೆ ಜೀವಮಾನದ ಉಚಿತ ಪಿಝಾ ಕುರಿತು ವಿಶೇಷ ಘೋಷಣೆ ಮಾಡಿದ ನಂತರ, ರೆಸ್ಟೋರೆಂಟ್ ತನ್ನ ಭರವಸೆಯನ್ನು ಈಡೇರಿಸಿದೆ. ಡೊಮಿನೊಸ್ ಇಂಫಾಲ್ ತಂಡವು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಪಿಜ್ಜಾವನ್ನು ತಲುಪಿಸಿದೆ. ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ನಾವು ಈ ಅದ್ಭುತ ಕ್ಷಣವನ್ನು ಮೀರಾಬಾಯಿ ಚಾನು ಅವರ ಪ್ರೀತಿಪಾತ್ರರೊಡನೆ ಹಂಚಿಕೊಳ್ಳುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಅವರು ಭಾರತೀಯರ ಮುಖದಲ್ಲಿ ಒಂದು ನಗು ತಂದರು.
 ನಮ್ಮ ಡೊಮಿನೊಸ್ ಇಂಫಾಲ್ ತಂಡವು ಅವರ ಕುಟುಂಬದೊಂದಿಗೆ ಯಶಸ್ಸನ್ನು ಆಚರಿಸಲು ಮೆಚ್ಚುಗೆಯ ಸಂಕೇತದೊಂದಿಗೆ ಬಂದಿದೆ ಎಂದು ಡೊಮಿನೊಸ್ ಇಂಡಿಯ ಟ್ವೀಟ್ ಮಾಡಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದಿಂದಾಗುವ ಪರಿಹಾರಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಟೀ ಶರ್ಟ್‌ ಒಳಗಡೆ ಕೈ ಹಾಕಿ ವ್ಯಕ್ತಿಯಿಂದ ವಿಕೃತಿ, video

ಮನೆ ಬಿಟ್ಟು ಹೋದ ಪತ್ನಿ, ಮಗಳನ್ನು ಕೊಂದು, ವ್ಯಕ್ತಿ ಮಾಡಿದ್ದೇನು ಗೊತ್ತಾ

ರೈತನ ಕೊಂದು ತೊಡೆ, ತಲೆ ಭಾಗ ತಿಂದು ಹಾಕಿದ ಹುಲಿ, ಮೈಸೂರಿನಲ್ಲಿ ವ್ಯಾಘ್ರ ದಾಳಿಗೆ ಮೂರು ಬಲಿ

ದಿಢೀರನೇ ತುಮಕೂರು ಪ್ರವಾಸವನ್ನು ರದ್ದು ಮಾಡಿದ ಸಿಎಂ, ಇದೇ ಕಾರಣ

ಮುಂದಿನ ಸುದ್ದಿ
Show comments