ನಗರದಲ್ಲಿ ಈರುಳ್ಳಿ ದರ ಗಗನಕ್ಕೇರಿದೆ.ಜೊತೆಗೆ ಟೊಮ್ಯಾಟೊ ದರವು ಗಗನಮುಖಿಯಾಗಿದೆ.ಆದ್ರೆ ಇದೀಗ ಕೇಂದ್ರ ಸರ್ಕಾರ ಗ್ರಾಹಕರಿಗೆ ಕೊಂಚ ಸಿಹಿ ಸುದ್ದಿ ಕೊಟ್ಟಿದೆ.
 
									
			
			 
 			
 
 			
			                     
							
							
			        							
								
																	
	 
	ಕೆಜಿಗೆ 250 ರೂ. ತಲುಪಿದ್ದ ಟೊಮ್ಯಾಟೋ ದರ 5-10 ರೂ.ಗೆ ಇಳಿದ ಬೆನ್ನಲ್ಲೇ ಇತ್ತ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 65 ರೂ.ವರೆಗೂ ತಲುಪಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಸಂಗ್ರಹದಲ್ಲಿದ್ದ ಈರುಳ್ಳಿಯನ್ನು ಕೆಜಿಗೆ 25 ರೂ. ನಂತೆ ಮಾರಾಟ ಮಾಡಲು ನಿರ್ಧರಿಸಿದೆ.