Select Your Language

Notifications

webdunia
webdunia
webdunia
webdunia

ಶನಿವಾರ ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ

ಶನಿವಾರ ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ
NewDelhi , ಶುಕ್ರವಾರ, 26 ಮೇ 2017 (11:58 IST)
ನವದೆಹಲಿ: ಸಿಬಿಎಸ್ಇ ಜಾರಿಗೆ ತಂದಿದ್ದ ಗ್ರೇಸ್ ಮಾರ್ಕ್ಸ್ ಪದ್ಧತಿಗೆ ದೆಹಲಿ ಹೈಕೋರ್ಟ್ ತಡೆ ನೀಡಿದ್ದರಿಂದ ತಡವಾಗಿದ್ದ ಸಿಬಿಎಸ್ಇ 10 ಮತ್ತು 12 ನೇ ತರಗತಿಗಳ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗುವ ನಿರೀಕ್ಷೆಯಿದೆ.

 
ಇದರಿಂದಾಗಿ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ ದಿನದ ಬಗ್ಗೆ ಇದ್ದ ಗೊಂದಲಗಳೂ ನಿವಾರಣೆಯಾಗಲಿವೆ. ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸದೇ ಇರಲು ನಿರ್ಧರಿಸಿದೆ.

ಹೀಗಾಗಿ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಶನಿವಾರ ಸಿಬಿಎಸ್ಇ ಫಲಿತಾಂಶ ಪ್ರಕಟವಾದರೆ, ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಫಲಿತಾಂಶ ಸೋಮವಾರ ಅಥವಾ ಮಂಗಳವಾರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಸಿಇಟಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳ ಆತಂಕವೂ ದೂರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಅತಿ ಉದ್ದದ ಧೋಲಾ-ಸಾದಿಯಾ ಸೇತುವೆ ಲೋಕಾರ್ಪಣೆ