Publish Date: Sat, 21 Oct 2017 (09:10 IST)
Updated Date: Sat, 21 Oct 2017 (09:12 IST)
ನವದೆಹಲಿ: ಬೋಫೋರ್ಸ್ ಹಗರಣಕ್ಕೆ ಮರುಜೀವ ನೀಡಲು ಸಿಬಿಐ ಕೇಂದ್ರ ಸರ್ಕಾರ ಒಪ್ಪಿಗೆ ಪಡೆಯಲು ಮುಂದಾಗಿದೆ. 2005 ರಲ್ಲಿ ತಾನು ಕೈಗೊಂಡ ನಿರ್ಧಾರದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಮಧ್ಯಂತರ ಅರ್ಜಿ ಸಲ್ಲಿಸಲು ಸರ್ಕಾರದ ಒಪ್ಪಿಗೆ ಕೇಳಿದೆ.
ಬೋಫೋರ್ಸ್ ಪ್ರಕರಣದಲ್ಲಿ ಯುರೋಪ್ ಮೂಲದ ಸಂಸ್ಥೆ ಮತ್ತು ಹಿಂದೂಜಾ ಬ್ರದರ್ಸ್ ವಿರುದ್ಧ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಲಿದೆ.
ಯುಪಿಎ ಅಧಿಕಾರಾವಧಿಯಲ್ಲಿಯೇ ಸಿಬಿಐ ಪ್ರಕರಣಕ್ಕೆ ಮರುಜೀವ ನೀಡಲು ಯತ್ನಿಸಿತ್ತು. ಆದರೆ ಅಂದಿನ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ನಡೆದ ಶಸ್ತ್ರಾಸ್ತ್ರ ಖರೀದಿ ಅವ್ಯವಹಾರ ಪ್ರಕರಣ ಇದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ