Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಹಸ್ತಾಕ್ಷರ ನಕಲು: ಇಬ್ಬರು ಆರೋಪಿಗಳನ್ನು ಬಂಧಿಸಿದ ಸಿಬಿಐ

ಪ್ರಧಾನಿ ಮೋದಿ ಹಸ್ತಾಕ್ಷರ ನಕಲು: ಇಬ್ಬರು ಆರೋಪಿಗಳನ್ನು ಬಂಧಿಸಿದ ಸಿಬಿಐ
ನವದೆಹಲಿ , ಶನಿವಾರ, 23 ಜುಲೈ 2016 (12:31 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಸ್ತಾಕ್ಷರವನ್ನು ನಕಲು ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
 
ಸ್ವರಾಜ್ ಕುಮಾರ್ ರಾಯ್ ಮತ್ತು ಸಹಚರ ಸುವೇಂದು ಕುಮಾರ್ ಬರ್ಮನ್ ಎನ್ನುವ ಆರೋಪಿಗಳನ್ನು ವಿಚಾರಣೆ ನಡೆಸಿದ ನಂತರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. 
 
ಜಾರ್ಖಂಡ್‌ನ ಬೋಕಾರೋ ಪಟ್ಟಣದ ನಿವಾಸಿಯಾದ ಸ್ವರಾಜ್ ಕುಮಾರ್ ರಾಯ್, ಪ್ರಧಾನಿ ಮೋದಿಯವರ ಹಸ್ತಾಕ್ಷರ ನಕಲು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
 
ಆರೋಪಿ ರಾಯ್, ಪ್ರಧಾನಮಂತ್ರಿಯವರ ಹಸ್ತಾಕ್ಷರ ನಕಲು ಮಾಡಿ ಪ್ರಧಾನಿ ಮಂತ್ರಿಯವರ ಕಚೇರಿಗೆ ರವಾನಿಸಿದಾಗ ಘಟನೆ ಬಳಕಿಗೆ ಬಂದಿದೆ. ಕೂಡಲೇ ವಿಷಯವನ್ನು ಸಿಬಿಐಗೆ ಮಾಹಿತಿ ನೀಡಿದ್ದರಿಂದ ಆರೋಪಿಯ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಜಾರ್ಖಂಡ್‌ನ ಬೋಕಾರೋ ಮತ್ತು ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣಪುರ್ ನಗರಗಳಲ್ಲಿ ಸಿಬಿಐ ದಾಳಿ ನಡೆಸಿದಾಗ ಪ್ರಧಾನಿ ಮೋದಿಯವರ ಹಸ್ತಾಕ್ಷರವಿರುವ ಅನೇಕ ನಕಲಿ ದಾಖಲೆಗಳು ಪತ್ತೆಯಾಗಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ: ರೂಪಾ ತಂಬದ