ಮುಂಬೈ: ಬಸ್ ಆಕ್ಸಿಡೆಂಟ್ ಆಗಿ ಏಳು ಮಂದಿ ಸಾವಿಗೆ ಕಾರಣವಾದ ಮೇಲೆ ಚಾಲಕ ತನ್ನ ಬ್ಯಾಗ್ ಎತ್ತಿಕೊಂಡು ಕಿಟಿಕಿ ಮೂಲಕ ಎಸ್ಕೇಪ್ ಆಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಎಲೆಕ್ಟ್ರಿಕ್ ಬಸ್ ಒಂದು ಬ್ರೇಕ್ ಫೇಲ್ ಆಗಿ ಸಿಕ್ಕ ಸಿಕ್ಕವರ ಮೇಲೆ ಹರಿದು ಏಳು ಮಂದಿಯ ಸಾವಿಗೆ ಕಾರಣವಾಗಿದೆ. ಈ ಅಪಘಾತದ ಬಳಿಕ ಚಾಲಕ ಸಂಜಯ್ ಮೋರೆ ತನ್ನ ಬ್ಯಾಗ್ ಎತ್ತಿಕೊಂಡು ಕಿಟಿಯಿಂದ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೇವಲ ಚಾಲಕ ಸಂಜಯ್ ಮೋರೆ ಮಾತ್ರವಲ್ಲ ಬಸ್ ನಲ್ಲಿದ್ದ ಇತರೆ ಪ್ರಯಾಣಿಕರೂ ಇದೇ ರೀತಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಬಸ್ ನ ಬಾಗಿಲಿನ ಮೂಲಕ ಹೋಗಲು ಅವಕಾಶವಿದ್ದರೂ ಅಷ್ಟು ಕಾಯಲು ತಾಳ್ಮೆಯಿಲ್ಲದ ಪ್ರಯಾಣಿಕರು ಕಿಟಿಕಿ ಗಾಜು ಒಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಸ್ ನೊಳಗೆ ಸಿಸಿಟಿವಿ ಅಳವಡಿಸಲಾಗಿತ್ತು. ಈ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯಗಳೂ ಸೆರೆಯಾಗಿವೆ. ಆದರೆ ಕಂಡಕ್ಟರ್ ರೀರ್ ಸೈಡ್ ಬಾಗಿಲಿನಿಂದ ಹಾರಿ ಹೊರಗೆ ಬಂದಿದ್ದಾರೆ. ಉಳಿದ ಪ್ರಯಾಣಿಕರೆಲ್ಲಾ ಸೋಮವಾರ ರಾತ್ರಿ ಅಪಘಾತ ನಡೆದಿದ್ದು, ಹಲವು ಪಾದಚಾರಿಗಳ ಮೇಲೆ ಬಸ್ ಹರಿದಿದೆ. ಪರಿಣಾಮ ಏಳು ಮಂದಿ ಸಾವನ್ನಪ್ಪಿ 42 ಮಂದಿ ಮೃತಪಟ್ಟಿದ್ದರು.