Select Your Language

Notifications

webdunia
webdunia
webdunia
webdunia

ಬಜೆಟ್ 2017: ಪ್ರಧಾನಿ ಮೋದಿ ಇ-ಗವರ್ನಮೆಂಟ್ ಚಿತ್ರಕ್ಕೆ ಅರುಣ್ ಜೇಟ್ಲಿ ಬಣ್ಣ

ಬಜೆಟ್ 2017
NewDelhi , ಬುಧವಾರ, 1 ಫೆಬ್ರವರಿ 2017 (12:17 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಂದಿನಿಂದಲೂ ನಗದು ರಹಿತ ವ್ಯವಹಾರದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಅವರ ಈ ಕನಸಿನ ಯೋಜನೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ ಬಜೆಟ್ ನಲ್ಲಿ ಬಣ್ಣ ಬಳಿಯುವ ಪ್ರಯತ್ನ ನಡೆದಿದೆ.

 
ಪರಿಣಾಮ, ಇನ್ನು ಮುಂದೆ ರೈಲ್ವೇ ಟಿಕೆಟ್ ಬುಕಿಂಗ್ ಮಾಡುವವರು ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡಿ ಹಣ ಉಳಿತಾಯ ಮಾಡಿಕೊಳ್ಳಬಹುದು. ಮೊದಲೆಲ್ಲಾ ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡಿದರೆ ಸೇವಾ ಶುಲ್ಕ ಕಡಿತ ಮಾಡಲಾಗುತ್ತಿತ್ತು.

ಇನ್ನು ಮುಂದೆ, ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡುವವರಿಗೆ ಸೇವಾ ಶುಲ್ಕವಿರುವುದಿಲ್ಲ. ಹೀಗಾಗಿ ಅನಗತ್ಯ ವೆಚ್ಚ ತಪ್ಪಿಸಬಹುದು. ಇದರಿಂದ ಪ್ರಯಾಣಿಕನ ಜೇಬಿಗೆ ಅಲ್ಪ ಮಟ್ಟಿಗೆ ಉಳಿತಾಯವಾಗಲಿದೆ. ಈ ಮೂಲಕ ಇ-ಸರ್ವಿಸ್ ಉತ್ತೇಜಿಸಲು ಉದ್ದೇಶಿಸಲಾಗಿದೆ.

ಅಲ್ಲದೆ ಬೀಮ್ ಆಪ್ ಬಳಕೆಯನ್ನು ಉತ್ತೇಜಿಸಲು ಕ್ರಮ. ಅಲ್ಲದೆ ಗ್ರಾಮ ಪಂಚಾಯತ್ ಗಳಿಗೆ ಇಂಟರ್ ನೆಟ್ ಸೇವೆ ಒದಗಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಎಲ್ಲಾ ಸರ್ಕಾರಿ ಸೇವೆಗಳಿಗೆ ಡಿಜಿಟಲ್ ಪಾವತಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ನಡೆಸಲು ಉದ್ದೇಶಿಸಲಾಗಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್ ಇಲ್ಲದವರಿಗೆ ಆಧಾರ್ ಪೇ ಜಾರಿ ಮಾಡಲಾಗುವುದು.

ನೇರ ನಗದು ಯೋಜನೆಗೆ ಹೆಚ್ಚುಒತ್ತು ನೀಡಲಾಗುವುದು ಮತ್ತು ಪೇಮೆಂಟ್ ನಿಯಂತ್ರಣ ಮಂಡಳಿ ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಜವಾದಿ ನಾಯಕನ ಅನುಮಾನಾಸ್ಪದ ಸಾವು