Publish Date: Sat, 27 Jan 2018 (07:17 IST)
Updated Date: Sat, 27 Jan 2018 (07:19 IST)
ನವದೆಹಲಿ: ಸದಾ ಗಡಿಯಲ್ಲಿ ಅಪ್ರಚೋದಿತ ಗುಂಡಿನ ಮಳೆಗರೆಗೈದು ಪ್ರಾಣ ತೆಗೆಯುವ ಪಾಕಿಸ್ತಾನ ಯೋಧರಿಗೆ ಗಣರಾಜ್ಯೋತ್ಸವ ಸಿಹಿ ನೀಡಲು ಭಾರತೀಯ ಯೋಧರು ನಿರಾಕರಿಸಿದ್ದಾರೆ.
ಸಾಮಾನ್ಯವಾಗಿ ಉಭಯ ದೇಶಗಳ ಸೈನಿಕರು ಈದ್ ಮಿಲಾದ್, ಸ್ವಾತಂತ್ರ್ಯೋತ್ಸವ ಮುಂತಾದ ಹಬ್ಬ, ವಿಶೇಷ ಸಂದರ್ಭಗಳಲ್ಲಿ ವಾಘಾ ಗಡಿಯಲ್ಲಿ ಸಿಹಿ ಹಂಚಿ ಶುಭ ಹಾರೈಸುತ್ತಾರೆ. ಆದರೆ ಈ ಬಾರಿ ಗಡಿಯಲ್ಲಿ ಪಾಕ್ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಸಿಟ್ಟಿಗೆದ್ದಿರುವ ಬಿಎಸ್ಎಫ್ ಯೋಧರು ಸಿಹಿ ನೀಡದೇ ಇರಲು ತೀರ್ಮಾನಿಸಿದ್ದರು.
ಅದರಂತೆ ಉಭಯ ದೇಶದ ಸೈನಿಕರು ಗಡಿಯಲ್ಲಿ ಕವಾಯತು ನಡೆಸಿದರಾದರೂ ಸಿಹಿ ಹಂಚಲಿಲ್ಲ. ಪ್ರತೀ ವರ್ಷ ನಡೆಯುವ ಸಂಪ್ರದಾಯವನ್ನು ಬಿಎಸ್ಎಫ್ ಈ ಬಾರಿ ಮಾಡಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ