Publish Date: Fri, 26 Jan 2018 (11:10 IST)
Updated Date: Fri, 26 Jan 2018 (11:11 IST)
ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಲು ಇಂಧನ ಸಚಿವ ಡಿ.ಕೆ.ಶಿವಕುಮಾರ ಪರದಾಡಿದ ಪ್ರಸಂಗ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.
ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿತ್ತು, ಆದರೆ, ಡಿ.ಕೆ.ಶಿವಕುಮಾರ ಧ್ವಜವನ್ನು ಎಷ್ಟು ಎಳೆದರೂ ಧ್ವಜ ಬಿಚ್ಚಿಕೊಳ್ಳದ ಪರಿಣಾಮ ಧ್ವಜಾರೋಹಣ ನೆರವೇರಿಸಲು ಪರದಾಡುವಂತಾಯಿತು.
ಧ್ವಜ ಬಿಚ್ಚಿಕೊಳ್ಳದ ಪರಿಣಾಮ ಸಚಿವರ ಸಹಾಯಕ ಧ್ವಜವನ್ನು ಹಾರಿಸಿ, ಧ್ವಜಾರೋಹಣ ನೆರವೇರಿಸಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.