Select Your Language

Notifications

webdunia
webdunia
webdunia
webdunia

ಅತ್ತಿಗೆಯ ಮೇಲೆ ಅತ್ಯಾಚಾರ ಮಾಡಿದ ತಮ್ಮನ ರುಂಡ ಚೆಂಡಾಡಿದ ಅಣ್ಣ

ಲಕ್ನೋ
ಲಕ್ನೋ : ಪತ್ನಿಯ ಮೇಲೆ ಅತ್ಯಾಚಾರ ಮಾಡಿದ ತಮ್ಮನನ್ನೇ ಅಣ್ಣ ಕೊಲೆ ಮಾಡಿ ಶವವನ್ನು ಜಮೀನಿನಲ್ಲಿ  ಬಿಸಾಡಿದ ಘಟನೆ ಉತ್ತರ ಪ್ರದೇಶದ ಬಿಜನೋರ್ ನಲ್ಲಿ ನಡೆದಿದೆ.

ಕಮಿಲ್ ಅಣ್ಣನಿಂದ ಕೊಲೆಯಾದ ತಮ್ಮ. ಈತ ತನ್ನ ಅತ್ತಿಗೆಯನ್ನು ಪತ್ನಿಯಾಗಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಲ್ಲದೇ ಒಂದೆರೆಡು ಬಾರಿ ಅತ್ತಿಗೆ ಮೇಲೆ ಅತ್ಯಾಚಾರ ಸಹ ಮಾಡಿದ್ದನು. ಈ ಬಗ್ಗೆ ಅತ್ತಿಗೆ ತನ್ನ ಪತಿಗೆ ತಿಳಿಸಿದ್ದಾಳೆ. ಈ ಹಿನ್ನಲೆಯಲ್ಲಿ ಅಣ್ಣ ಹಾಗೂ ತಮ್ಮನ ನಡುವೆ ಜಗಳ ನಡೆದಿದೆ.  ಆದರೂ ತಮ್ಮನ ಕಿರುಕುಳ ಹೆಚ್ಚಾಗುತ್ತಿದ್ದ ಕಾರಣ ಅಣ್ಣ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ತಮ್ಮನ ಕತ್ತು ಕತ್ತರಿಸಿ ಕೊಲೆ ಮಾಡಿ ಸಮೀಪದ ಖಾಲಿ ಜಮೀನಿನಲ್ಲಿ ಶವ ಬಿಸಾಡಿದ್ದರು.

 

ಈ ಶವ ಪತ್ತೆಯಾದ ಹಿನ್ನಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಾಗೇ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು,  ಅವರ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿಗಾಗಿ ಗರ್ಭಿಣಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಚಿಕ್ಕಪ್ಪ