ಮುಂಬೈ: ಅತ್ತಿಗೆ ಸ್ನಾನ ಮಾಡುವಾಗ ರಹಸ್ಯವಾಗಿ ಚಿತ್ರೀಕರಿಸಿಕೊಂಡ ಮೈದುನ ಕೊನೆಗೆ ಬ್ಲ್ಯಾಕ್ ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ.
25 ವರ್ಷದ ಆರೋಪಿಗೆ ಅತ್ತಿಗೆ ಮೇಲೆ ಕಣ್ಣಿತ್ತು. ಇದಕ್ಕಾಗಿ ಆಕೆಯನ್ನು ಒಪ್ಪಿಸಲು ಸ್ನಾನ ಮಾಡುವಾಗ ಕದ್ದು ವಿಡಿಯೋ ಮಾಡಿದ್ದ. ಬಳಿಕ ಅದನ್ನೇ ತೋರಿಸಿ ತನ್ನಾಸೆ ತೀರಿಸದೇ ಹೋದರೆ ಇದನ್ನು ಬಯಲು ಮಾಡುವುದಾಗಿ ಬೆದರಿಕೆ ಹಾಕಿದ್ದ.
ಆಕೆ ಒಪ್ಪದೇ ಹೋದಾಗ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿದ್ದಾನೆ. ಪದೇ ಪದೇ ಮೈದುನ ಕಿರುಕುಳ ನೀಡಲಾರಂಭಿಸಿದಾಗ ತಡೆಯಲಾಗದೇ ಗಂಡನ ಬಳಿ ಮಹಿಳೆ ನಿಜಾಂಶ ಹೇಳಿದ್ದಾಳೆ. ನಂತರ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆರೋಪಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ.