Daily Horoscope

Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರ ತನ್ನಿ, ಎಲ್ಲರಿಗೂ ಒಂದೇ ಕಾನೂನು ತರುತ್ತೇವೆ: ಅಮಿತ್ ಶಾ

West Bengal Election
ಪುರುಲಿಯಾ (ಪಶ್ಚಿಮ ಬಂಗಾಳ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್  ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು. 

ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಯಾವುದೇ ಭ್ರಷ್ಟರನ್ನು ಉಳಿಸುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು ಹೇಳಿದರು. 

ಮಮತಾ ಬ್ಯಾನರ್ಜಿ ಅವರು ಇಡೀ ಬಂಗಾಳವನ್ನು ಭ್ರಷ್ಟಾಚಾರದ ಬೆಂಕಿಯಲ್ಲಿ ಹಾಕಿದ್ದಾರೆ. 

ಟಿಎಂಸಿಯು ಶಿಕ್ಷಕರ ನೇಮಕಾತಿ ಹಗರಣ, ಮಹಾನಗರ ಪಾಲಿಕೆ ನೇಮಕಾತಿ ಹಗರಣ, ಗೋವು ಕಳ್ಳಸಾಗಣೆ ಹಗರಣ, ಪಡಿತರ ಹಗರಣ, ಎಂಜಿಎನ್‌ಆರ್‌ಇಜಿಎ ಹಗರಣ, ಪಿಎಂ ಆವಾಸ್ ಹಗರಣ ಮಾಡಿದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಒಂದೇ ಒಂದು ಹಗರಣ ಮಾಡಲು ಬಿಡುವುದಿಲ್ಲ ಎಂದರಿ. 

ಒಬ್ಬ ಭ್ರಷ್ಟರನ್ನೂ ಬಿಡುವುದಿಲ್ಲ, ಬಿಜೆಪಿ ಸರ್ಕಾರ ತನ್ನಿ, ಹಿಂದೂ ಮತ್ತು ಮುಸಲ್ಮಾನರಿಬ್ಬರಿಗೂ ಒಂದೇ ಕಾನೂನಿರುವ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುತ್ತೇವೆ ಎಂದು ಹೇಳಿದರು. 




Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ನಿಯಮ ಉಲ್ಲಂಘಿಸಿದವನಿಗೆ ವಿಭಿನ್ನ ಶಿಕ್ಷೆ ಕೊಟ್ಟ ಹೈಕೋರ್ಟ್‌