Publish Date: Sat, 11 Apr 2026 (16:00 IST)
Updated Date: Sat, 11 Apr 2026 (16:28 IST)
ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದರೆ, ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಮಾತ್ರವಲ್ಲ ಸಬ್ ಕಾ ಹಿಸಾಬ್ ಮಂತ್ರವನ್ನು ಪಾಲಿಸುತ್ತದೆ. ಅದಲ್ಲದೆ ಭಾರತಕ್ಕೆ ಒಳನುಸುಳಿದವರನ್ನು ಹೊರದಬ್ಬಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪೂರ್ವ ವರ್ಧಮಾನ್ ಜಿಲ್ಲೆಯ ಕಟ್ವಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಎಚ್ಚರಿಕೆ ನೀಡಿದರು.
ಬಂಗಾಳದಲ್ಲಿರುವ ಮತುವಾ, ನಮಸುದ್ರ ಹಾಗೂ ಎಲ್ಲಾ ನಿರಾಶ್ರಿತ ಸಮುದಾಯಗಳಿಗೆ ಗ್ಯಾರಂಟಿ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಟಿಎಂಸಿಯ ಯಾವುದೇ ನಾಯಕನ ಕೃಪೆಯಿಂದ ನೀವು ಇಲ್ಲಿ ಇಲ್ಲ. ಸಂವಿಧಾನದ ರಕ್ಷಣೆಯಿಂದ ನೀವು ಇಲ್ಲಿ ಇದ್ದೀರಿ ಎಂದು ಹೇಳಿದರು.
ಈ ಸಮುದಾಯಗಳ ರಕ್ಷಣೆಗೆ, ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲು ಮೋದಿ ಸಿಎಎ ಕಾನೂನು ತಂದಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಕೆಲಸ ಮಾಡಲಾಗುವು ದು ಎಂದು ಭರವಸೆ ನೀಡಿದರು.
ಇನ್ನೂ ಬಿಜೆಪಿ ಸರ್ಕಾರ ಬಂಗಾಳವನ್ನು ಮತ್ತೊಂದು ದೊಡ್ಡ ಸಮಸ್ಯೆಯಿಂದ ಮುಕ್ತಿಗೊಳಿಸಲಿದೆ. ಭಾರತಕ್ಕೆ ಒಳನುಸುಳುವವರನ್ನು ಹೊರದಬ್ಬಲಾಗುವುದು ಎಂದು ಹೇಳಿದರು.
ನಿಮಗೆ ಸೇರಿದ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ ಎಂದು ನಾನು ನುಸುಳುಕೋರರಿಗೆ ಹೇಳುತ್ತೇನೆ. ನೀವು ನಿರ್ಗಮಿಸುವ ಸಮಯ ಬಂದಿದೆ ಎಂದು ಹೇಳಿದರು. ಈ ವೇಳೆ ಜನರಿಂದ ಹರ್ಷೋದ್ಗಾರ ಮೊಳಗಿತು.
Sampriya
Publish Date: Sat, 11 Apr 2026 (16:00 IST)
Updated Date: Sat, 11 Apr 2026 (16:28 IST)