Webdunia - Bharat's app for daily news and videos

Install App

ಕಪ್ಪು ಹಣ ವಾಪಸ್ ತಂದ್ರಾ? ಪ್ರಧಾನಿ ಮೋದಿ ವಿರುದ್ಧ ಸೋನಿಯಾ ಕಿಡಿ

Webdunia
ಮಂಗಳವಾರ, 19 ಡಿಸೆಂಬರ್ 2023 (11:51 IST)
ಬಿಜೆಪಿ ಸರಕಾರ ಜನರಿಗೆ ಬರಿ ನಕಲಿ ಕನಸುಗಳನ್ನು ತೋರಿಸಿ ವಂಚಿಸುತ್ತಿದೆ. 100 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುತ್ತೇವೆ ಎಂದು ದೇಶದ ಜನತೆಯ ಮುಂದೆ ಪ್ರಮಾಣ ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕನಸು ಸಾಕಾರಗೊಳಿಸಿಲ್ಲ ಎಂದು  ಕಾಂಗ್ತೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗೇಟು ನೀಡಿದ್ದಾರೆ.
 
ಕೇಂದ್ರದಲ್ಲಿ ಗದ್ದುಗೆ ಹಿಡಿದಿರುವ ಮೋದಿ ನೇತೃತ್ವದ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಅಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೆಚ್ಚು ಕೂಗಾಡುವವರು ಸತ್ಯವಂತರಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
 
ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣವಾಗಿದೆಯಾ? ಕಪ್ಪು ಹಣ ವಾಪಸ್ ತಂದ್ರಾ? ಚುನಾವಣೆಯಲ್ಲಿ ನೀಡಿದ ಅಶ್ವಾಸನೆಗಳು ಅಶ್ವಾಸನೆಗಳಾಗಿಯೇ ಉಳಿದಿವೆ. ಅಧಿಕಾರಕ್ಕಾಗಿ ಯಾರ ಜತೆ ಬೇಕಾದರೂ ಕೈಜೋಡಿಸುತ್ತಾರೆ. ಖಾಸಿ ಬಿಂದಿಗೆಯಲ್ಲಿ ಸದ್ದು ಮಾಡುವ ತರ ಇವರ ಅಶ್ವಾಸನೆಗಳಿವೆ ಎಂದು ಲೇವಡಿ ಮಾಡಿದರು.
 
10 ವರ್ಷ ಹರಿಯಾಣಾ ಜನರ ಸೇವೆ ಮಾಡಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದೀಗ ಮೋದಿ ನೇತೃತ್ವದ ಬಿಜೆಪಿ ಸರಕಾರ ಯೋಜನೆಗಳ ಹೆಸರುಗಳನ್ನು ಬದಲಿಸಿ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿಗೆ 5 ರೂ ಕೊಟ್ಟಿಲ್ಲ, ನಿಮ್ಮಪ್ಪ ರಾಜೀನಾಮೆ ಕೊಡ್ಲಿ: ಯತೀಂದ್ರಗೆ ಸಲಹೆ ಕೊಟ್ಟ ಪ್ರತಾಪ್ ಸಿಂಹ

Gold Price today: ಚಿನ್ನದ ಬೆಲೆ ಭಾರೀ ಏರಿಕೆ

ಸೋನಿಯಾ ಗಾಂಧಿ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಮುಂದಿನ ಸುದ್ದಿ
Show comments