Select Your Language

Notifications

webdunia
webdunia
webdunia
webdunia

ಮದುವೆ ನಂತರವು ಕ್ರಿಕೆಟ್ ಆಡಲು ಕಳಿಸಬೇಕು ಎಂದು ಬಾಂಡ್ ಸಹಿ ಹಾಕಿಸಿಕೊಂಡ ವರನ ಸ್ನೇಹಿತರು

ಮದುವೆ ನಂತರವು ಕ್ರಿಕೆಟ್ ಆಡಲು ಕಳಿಸಬೇಕು ಎಂದು ಬಾಂಡ್ ಸಹಿ ಹಾಕಿಸಿಕೊಂಡ ವರನ ಸ್ನೇಹಿತರು
ಬೆಂಗಳೂರು , ಭಾನುವಾರ, 11 ಸೆಪ್ಟಂಬರ್ 2022 (15:39 IST)
ಮದುವೆ ಮನೆಯಲ್ಲಿ ವಾರಾಂತ್ಯದಲ್ಲಿ ವರನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ವಧುವಿನ ಕಡೆಯಿಂದ ವರನ ಸ್ನೇಹಿತರು ಬಾಂಡ್ ಬರೆಸಿಕೊಂಡಿದ್ದಾರೆ. 
 
ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿ ನಡೆದ ವಿವಾಹ ಸಮಾರಂಭ ಇಂತಹ ವಿಚಿತ್ರ ಹಾಗೂ ಅಚ್ಚರಿಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೀಳ ಪುದೂರಿನ ನಿವಾಸಿ ಹರಿಪ್ರಸಾದ್ ಹಾಗೂ ಪೂಜಾ ಆಗಷ್ಟೇ ಹಸೆಮಣೆ ಏರಿ ವೇದಿಕೆಗೆ ಬಂದಿದ್ದರು. ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಪ್ರಸಾದ್, ಸ್ಥಳೀಯ ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದ ನಾಯಕರಾಗಿದ್ದಾರೆ.
 
ಹೀಗಾಗಿಯೇ ಹರಿಪ್ರಸಾದ್ ಮದುವೆಗೆ ಕ್ರಿಕೆಟ್​ ತಂಡದ ಸದಸ್ಯರು ಹಾಗೂ ಸ್ನೇಹಿತರು ಬಂದಿದ್ದರು. ವೇದಿಕೆ ಮೇಲೆ ಬಂಧು ಮಿತ್ರರು ನವದಂಪತಿಗೆ ಶುಭಾಶಯ ಕೋರುವ ಕಾರ್ಯದಲ್ಲಿ ನಿರತರಾಗಿದ್ದರೆ, ಕ್ಲಬ್‌ನ ಆಟಗಾರರು ವರನ ಸ್ನೇಹಿತರ ವಧು ಪೂಜಾ ಕೈಗೆ ಒಂದು ಬಾಂಡ್​ ಪೇಪರ್​ ನೀಡಿದ್ದಾರೆ. ಈ ವೇಳೆ ಪೂಜಾ ತನಗೆ ಏನೋ ಚೇಷ್ಟೆ ಮಾಡಲು ಹೊರಟಿದ್ದಾರೆ ಎಂದುಕೊಂಡಿದ್ದರು. 
ಆದರೂ, ವರನ ಸ್ನೇಹಿತರು ಪಟ್ಟು ಬಿಡದೇ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಪೂಜಾರನ್ನು ಒತ್ತಾಯಿಸಿದ್ದಾರೆ. ಅಂತೆಯೇ, ಪೂಜಾ ಸಹಿ ಹಾಕಿದ ತರುವಾಯವೇ ವಾರಾಂತ್ಯದಲ್ಲಿ ಗಂಡನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಐದು ಸಾಲಿನ ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರದಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ