Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಯ ಎಡವಟ್ಟಿನಿಂದ ಪ್ರಾಣ ಕಳೆದುಕೊಂಡಳು!

ಲೈಂಗಿಕ ಕ್ರಿಯೆಯ ಎಡವಟ್ಟಿನಿಂದ ಪ್ರಾಣ ಕಳೆದುಕೊಂಡಳು!
ಮುಂಬೈ , ಗುರುವಾರ, 5 ಜುಲೈ 2018 (09:04 IST)
ಮುಂಬೈ: ಲೈಂಗಿಕ ಕ್ರಿಯೆ ನಡೆಸುವಾಗ ಉಸಿರುಗಟ್ಟಿ ಪ್ರಿಯತಮೆ  ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ನ ಯುವಕನೊಬ್ಬನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಳೆದ ವರ್ಷ ದ. ಮುಂಬೈಯ ಹೋಟೆಲ್ ಕೊಠಡಿಯೊಂದರಲ್ಲಿ ಈ ಘಟನೆ ನಡೆದಿತ್ತು. ಲೈಂಗಿಕ ಕ್ರಿಯೆ ನಡೆಸುವಾಗ ಉಸಿರುಗಟ್ಟಿ 20 ವರ್ಷದ ಇಸ್ರೇಲ್ ಯುವತಿ ಸಾವನ್ನಪ್ಪಿದ್ದಳು ಎಂಬುದು ಇದೀಗ ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಇಸ್ರೇಲ್ ಯುವಕ ಒರಿರೋನ್ ಯಾಕೋವ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇವರಿಬ್ಬರೂ ಅಂದು ಭಾರತ ಪ್ರವಾಸಕ್ಕಾಗಿ ಟೂರಿಸ್ಟ್ ವೀಸಾದಲ್ಲಿ ಬಂದಿದ್ದರು. ಲೈಂಗಿಕ ಕ್ರಿಯೆ ಸಂದರ್ಭ ಯಾಕೋವ್ ತನ್ನ ಪ್ರಿಯತಮೆಯ ಕುತ್ತಿಗೆ ಬಿಗಿ ಹಿಡಿದಿದ್ದ. ಈ ಸಂದರ್ಭದಲ್ಲಿ ಪ್ರಿಯತಮೆ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಳು ಎನ್ನಲಾಗಿದೆ. ಘಟನೆ ಬಳಿಕ ಹೋಟೆಲ್ ಸಿಬ್ಬಂದಿಗೆ ತನ್ನ ಪ್ರಿಯತಮೆ ನಿಶ್ಛಲಳಾಗಿ ಬಿದ್ದಿದ್ದಾಳೆಂದು ಯಾಕೋವ್ ಅಲವತ್ತು ಗೈದಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಟ್ಸಪ್ ನಲ್ಲಿ ಮೆಸೇಜ್ ಫಾರ್ವರ್ಡ್ ಮಾಡುವ ಮುನ್ನ ಹುಷಾರ್!