Select Your Language

Notifications

webdunia
webdunia
webdunia
webdunia

ಪಿಜ್ಜಾ ಕಟರ್ ನಿಂದ ತಾಯಿ, ತಂಗಿಯನ್ನೇ ಕೊಂದ ಬಾಲಕ

ಪಿಜ್ಜಾ ಕಟರ್ ನಿಂದ ತಾಯಿ, ತಂಗಿಯನ್ನೇ ಕೊಂದ ಬಾಲಕ
ಬೆಂಗಳೂರು , ಭಾನುವಾರ, 10 ಡಿಸೆಂಬರ್ 2017 (12:04 IST)
Normal 0 false false false EN-US X-NONE X-NONE
ದೆಹಲಿ: ಹದಿನಾರು ವರ್ಷದ ಬಾಲಕನೊಬ್ಬ ತಾಯಿ ಹಾಗು ತಂಗಿ ಬೈದರು ಎಂಬ ಕಾರಣಕ್ಕೆ ಅವರನ್ನು ಪಿಜ್ಜಾ ಕಟರ್ ನಿಂದ ಕೊಲೆ ಮಾಡಿದ ಘಟನೆಯೊಂದು ನವದೆಹಲಿಯ ಫ್ಲ್ಯಾಟ್ ವೊಂದರಲ್ಲಿ ನಡೆದಿದೆ.


ಕಲಿಯುವಿಕೆಯಲ್ಲಿ ಹಿಂದಿರುವ ಕಾರಣ ತಾಯಿ ಹಾಗು ತಂಗಿ ಆತನನ್ನುಬೈದಾಗ ಕೋಪಗೊಂಡ ಬಾಲಕ ಮೊದಲು ಬ್ಯಾಟ್ ನಿಂದ ಹಲ್ಲೆಮಾಡಿ ಅನಂತರ ಪಿಜ್ಜಾ ಕಟರ್ ನಿಂದ ಕೊಲೆ ಮಾಡಿದ್ದಾನೆ. ನಂತರ ಮನೆಯಲ್ಲಿದ್ದ 2ಲಕ್ಷ ರೂ. ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.


ವಾರಾಣಸಿಗೆ ತೆರಳಿದ ಆತ ಅಲ್ಲಿಂದ ತಂದೆಗೆ ಕರೆಮಾಡಿದಾಗ  ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿಯಲ್ಲಿ ಆತ ತಾಯಿ ಹಾಗು ತಂಗಿ ಜೊತೆ ಫ್ಲ್ಯಾಟ್ ಗೆ ತೆರಳಿದ್ದು, ಒಂಟಿಯಾಗಿ ರಾತ್ರಿ 11.30ಕ್ಕೆ ಅಲ್ಲಿಂದ ಹೊರಗೆ ಬಂದಿದ್ದ ದೃಶ್ಯ ಸೆರೆಯಾಗಿದೆ. ಆತನ ರಕ್ತಸಿಕ್ತ ಬಟ್ಟೆ ಫ್ಲ್ಯಾಟ್ ನಲ್ಲಿ ಸಿಕ್ಕಿದ್ದು, ಆತನೆ ಕೊಲೆ ಮಾಡಿರುವ ಶಂಕೆ ಪೊಲೀಸರಲ್ಲಿ ಮೂಡಿತ್ತು. ಆನಂತರ ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಭಾರತರತ್ನಕ್ಕೆ ನಿಜಲಿಂಗಪ್ಪ ಅವರ ಹೆಸರು-ಸಿಎಂ ಸಿದ್ದರಾಮಯ್ಯ ಭರವಸೆ