Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು

Cricket Ball pune

Sampriya

ಪುಣೆ , ಸೋಮವಾರ, 6 ಮೇ 2024 (15:40 IST)
Photo Courtesy X
ಪುಣೆ: ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವಾಗ ಚೆಂಡು ಬಾಲಕನ ಖಾಸಗಿ ಅಂಗಕ್ಕೆ ಬಡಿದು ಸಾವನ್ನಪ್ಪಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು 11 ವರ್ಷದ ಶೌರ್ಯ ಎಂದು ಗುರುತಿಸಲಾಗಿದೆ. ಈ ದಾರುಣ ಘಟನೆಯ ವಿಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುಣೆಯ ಲೋಹಗಾಂವ್‌ನಲ್ಲಿರುವ ಜಗದ್ಗುರು ಸ್ಪೋರ್ಟ್ಸ್ ಅಕಾಡೆಮಿಯಲ್ಲಿ  ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್ ಆಡುವಾಗ ಈ ಘಟನೆ ನಡೆಸಿದೆ. ಬ್ಯಾಟ್ಸ್​ಮನ್ ಬಾರಿಸಿದ ಚೆಂಡು ನೇರವಾಗಿ ಬೌಲಿಂಗ್ ಮಾಡುತ್ತಿದ್ದ ಶೌರ್ಯನ ಖಾಸಗಿ ಅಂಗಕ್ಕೆ ಬಲವಾಗಿ ಬಡಿದಿದೆ. ಇನ್ನೂ ತೀವ್ರವಾದ ಹೊಡೆತಕ್ಕೆ ಬಾಲಕ ಅಲ್ಲೇ ಅಸ್ವಸ್ಥಗೊಂಡಿದ್ದಾನೆ.

ಸ್ನೇಹಿತರು ಆತನನ್ನು ಎಚ್ಚರಿಸಲು ಪ್ರಯತ್ನಿಸಿದರು ಎದ್ದೇಳಲಿಲ್ಲ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ದೂರಿನಲ್ಲಿ ಹಠಾತ್ ಸಾವು ಎಂದು ತಿಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೇಜಸ್ವಿ ಯಾದವ್ ಬದಲು ತೇಜಸ್ವಿ ಸೂರ್ಯಗೆ ಹಿಗ್ಗಾಮುಗ್ಗಾ ಜಾಡಿಸಿದ ಕಂಗನಾ ರಣಾವತ್