Publish Date: Sun, 01 May 2016 (11:43 IST)
Updated Date: Sun, 01 May 2016 (12:17 IST)
ಸೆಲ್ಫಿ ಕ್ರೇಜ್‌ನಿಂದ ಪ್ರಾಣಕ್ಕೆ ಆಪತ್ತು ತೆಗೆದುಕೊಳ್ಳುವ ಘಟನೆಗಳು ಇತ್ತೀಚಿಗೆ ಪದೇ ಪದೇ ವರದಿಯಾಗುತ್ತಿವೆ. 15 ವರ್ಷದ ಬಾಲಕನೋರ್ವ ರಿವಾಲ್ವರ್ ಹಿಡಿದುಕೊಂಡು ಸೆಲ್ಫಿ ಕ್ಲಿಕ್ಕಿಸಲು ಹೋಗಿ ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಪಠಾಣ್‌ಕೋಟ್‌ನ ಶಿವನಗರ್‌ದ ನಿವಾಸಿ ರಮಣದೀಪ್ ಸಿಂಗ್ ಎಂಬ 15 ವರ್ಷದ ಬಾಲಕ, ಮನೆಯಲ್ಲಿದ್ದ ಲೋಡ್ ಆಗಿದ್ದ ಗನ್ ಎತ್ತಿಕೊಂಡು ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾನೆ. ಈ ವೇಳೆ ಅರಿವಿಲ್ಲದೇ ರಿವಾಲ್ವರ್ ಟ್ರಿಗರ್‌ನ್ನು ಒತ್ತಿ ಬಿಟ್ಟಿದ್ದಾನೆ. ಪರಿಣಾಮ, ರಮಣದೀಪ್ ತಲೆಗೆ ಗುಂಡು ತಗುಲಿದ್ದು ಗಂಭೀರವಾಗಿ ಗಾಯಗೊಂಡ ಆತನನ್ನು ಲೂಧಿಯಾನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ರಮಣದೀಪ್ ಸಿಂಗ್ ತಂದೆ ಗುರುಪಾಲ್ ಸಿಂಗ್ ಪ್ರಾಪರ್ಟಿ ಡೀಲರ್ ಆಗಿದ್ದು, ಪರವಾನಿಗೆ ಮೇಲೆ ರಿವಾಲ್ವರ್ ಇಟ್ಟುಕೊಂಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಬಾಲಕ ಚೇತರಿಸಿಕೊಂಡ ಬಳಿಕ ಘಟನೆಯ ತನಿಖೆ ನಡೆಸುವುದಾಗಿ ಹೇಳಿದ್ದಾರೆ.