Publish Date: Sun, 01 May 2016 (10:26 IST)
Updated Date: Sun, 01 May 2016 (12:17 IST)
ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ವೈದ್ಯರ ಮೇಲೆ ಸೂಡಾನ್ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಅಗ್ರಹಾರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು ಮೂವರು ಪುಂಡ ವಿದ್ಯಾರ್ಥಿಗಳು ಕಾರ್ತಿಕ್ ಉಡುಪಾ ಎಂಬ ವೈದ್ಯರ ಕಾರ್‌ನ್ನು ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರ್ ನಿಲ್ಲಿಸಿದ ವೈದ್ಯರು ಈ ಕುರಿತು ಪ್ರಶ್ನಿಸಿದ್ದಕ್ಕೆ
ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸೂಡಾನ್ ವಿದ್ಯಾರ್ಥಿಗಳು ಹಲ್ಲೆ ಕೂಡ ನಡೆಸಿದ್ದಾರೆ.
ಕಾರಿನಲ್ಲಿದ್ದ ಕಾರ್ತಿಕ್ ಅವರ ಪತ್ನಿ ಮತ್ತು ಸ್ನೇಹಿತ ಡಾ. ದೀಪಕ್ ಮೇಲೂ ಕೂಡ ದಾಳಿ ನಡೆಸಿದ ಪುಂಡ ಯುವಕರು ಅವರನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಘಟನೆಯಲ್ಲಿ ಕಾರ್ತಿಕ್ ಕಣ್ಣಿಗೆ ಬಲವಾಗಿ ಹೊಡೆದು ಟೀಶರ್ಟ್ ಹರಿದು ಹಾಕಿದ್ದಲ್ಲದೇ, ಅವರ ಪತ್ನಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರಂತೆ. ಅಲ್ಲದೇ ಕಾರ್ತಿಕ್ ಕಾರಿನಲ್ಲಿದ್ದ ಸ್ನೇಹಿತ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರಿನ ಕೆಆರ್ ಠಾಣೆಯಲ್ಲಿ ಮೂವರ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.