Publish Date: Tue, 30 Jan 2018 (10:00 IST)
Updated Date: Tue, 30 Jan 2018 (10:03 IST)
ಹೈದರಾಬಾದ್: ಪ್ರಸಿದ್ಧ ತೀರ್ಥಕ್ಷೇತ್ರ ತಿರುಪತಿ ದೇವಾಲಯದಲ್ಲಿ ದುಷ್ಕರ್ಮಿಗಳು ಬಾಂಬ್ ಸ್ಪೋಟಕ್ಕೆ ನಡೆಸಿದ್ದ ಸಂಚು ಇದೀಗ ಬಯಲಾಗಿದೆ.
ಶ್ರೀವಾರಿ ಮೆಟ್ಟಿಲು ಬಳಿಯ ಅರಣ್ಯ ಪ್ರದೇಶದಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ರಕ್ತ ಚಂದನ ಕಳ್ಳರಿಗಾಗಿ ಕೂಂಬಿಂಗ್ ನಡೆಸುವ ವೇಳೆ ಸ್ಪೋಟಕ ವಸ್ತು ಪತ್ತೆಯಾಗಿದೆ.
ಹೀಗಾಗಿ ತಿರುಪತಿ ದೇವಾಲದ ಮೇಲೆ ಸ್ಪೋಟ ನಡೆಸಲು ಸಂಚು ರೂಪಿಸಿರುವುದು ಬಯಲಾಗಿದೆ. ಆದರೆ ಇದರ ಹಿಂದೆ ಯಾರ ಕೈವಾಡವಿದೆ ಎನ್ನುವುದು ಪತ್ತೆಯಾಗಬೇಕಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ