Webdunia - Bharat's app for daily news and videos

Install App

Mallikarjun Kharge: ಬಿಜೆಪಿ ಅಕ್ರಮವಾಗಿ ಚುನಾವಣೆ ಗೆಲ್ತಿದೆ, ಹೀಗೇ ಆದ್ರೆ ಮೋದಿ ದೇಶವನ್ನೇ ಮಾರುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Krishnaveni K
ಬುಧವಾರ, 9 ಏಪ್ರಿಲ್ 2025 (13:44 IST)
ಅಹಮ್ಮದಾಬಾದ್: ಎರಡು ದಿನಗಳ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ದೇಶದಲ್ಲಿ ಅಕ್ರಮವಾಗಿ ಚುನಾವಣೆಗಳನ್ನು ಗೆಲ್ಲುತ್ತಿದೆ. ಹೀಗಾಗಿ ಮತ್ತೆ ಮತಪತ್ರ ವಿಧಾನದ ಮೂಲಕ ಚುನಾವಣೆಗಳು ನಡೆಯಬೇಕು. ಹೀಗೇ ಮುಂದುವರಿದರೆ ಮುಂದೆ ಮೋದಿ ದೇಶವನ್ನೇ ಮಾರುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಅಹಮ್ಮದಾಬಾದ್ ನಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಇಂದು ಭಾಷಣ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಕ್ರಮವಾಗಿ ಮತಯಂತ್ರದ ಮೂಲಕ ಚುನಾವಣೆ ಗೆದ್ದಿತು. ಇದೇ ರೀತಿ ಬಿಜೆಪಿ ಅನೇಕ ಚುನಾವಣೆಗಳನ್ನು ಅಕ್ರಮವಾಗಿ ಗೆದ್ದಿದೆ. ಇದಕ್ಕೆ ಪರಿಹಾರವೆಂದರೆ ಮತಪತ್ರ. ಹಿಂದಿನ ಕಾಲದಂತೆ ಮತ್ತೆ ಮತಪತ್ರದ ಮೂಲಕ ಚುನಾವಣೆಗಳು ನಡೆಯಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದಿದ್ದಾರೆ.

ಮೋದಿ ಸರ್ಕಾರ ಸರ್ಕಾರೀ ಆಸ್ತಿಗಳನ್ನು ಕೆಲವು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲ್ಲುತ್ತಿದೆ. ಇಡೀ ಜಗತ್ತೇ ಈಗ ಇವಿಎಂ ಯಂತ್ರದಿಂದ ಬ್ಯಾಲೆಟ್ ಪೇಪರ್ ಕಡೆಗೆ ಸಾಗುತ್ತಿದೆ.

ಇದರ ಬಗ್ಗೆ ಪ್ರಶ್ನಿಸಲು ಹೋದರೆ ಇವಿಎಂ ದೋಷ ಸಾಬೀತುಪಡಿಸಿ ಎನ್ನುತ್ತಾರೆ. ಆದರೆ ಅವರು ಇವಿಎಂ ಯಂತ್ರಗಳಿಂದ ಆಡಳಿತ ಪಕ್ಷಕ್ಕೆ ಉಪಯೋಗವಾಗಿ ವಿರೋಧ ಪಕ್ಷಕ್ಕೆ ಹಿನ್ನಡೆಯಾಗುವಂತೆ ಸೆಟ್ ಮಾಡಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.

ಮಹಾರಾಷ್ಟ್ರ ಚುನಾವಣೆಯೇ ಅಕ್ರಮವಾಗಿತ್ತು. ಅಲ್ಲಿ ವೋಟರ್ ಲಿಸ್ಟ್ ನಲ್ಲಿ ಏನಿತ್ತು? ಇವಿಎಂ ಯಂತ್ರಗಳು ದೋಷಪೂರಿತವಾಗಿತ್ತು. ಇದರ ಬಗ್ಗೆ ರಾಹುಲ್ ಗಾಂಧಿಯವರು ಪ್ರಬಲವಾಗಿ ಧ್ವನಿಯೆತ್ತಿದ್ದರು. ಹರ್ಯಾಣದಲ್ಲೂ ಇದೇ ರೀತಿ ಆಗಿದೆ. ಕಳ್ಳ ಯಾವತ್ತಿದ್ದರೂ ಸಿಕ್ಕಿಬೀಳಲೇಬೇಕು. ನಮ್ಮ ಲಾಯರ್ ಗಳು, ನಾಯಕರು ಸತ್ಯ ಶೋಧನೆಯ ಹಾದಿಯಲ್ಲಿದ್ದಾರೆ.

ಕಳೆದ 11 ವರ್ಷಗಳಿಂದ ಆಡಳಿತ ಪಕ್ಷ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಇದೆ. ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿಯಾಗುತ್ತಲೇ ಇದೆ. ಇದನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು. ಲೋಕಸಭೆಯಲ್ಲಿ ಬಜೆಟ್ ಸೆಷನ್ ವೇಳೆ ಸ್ಪೀಕರ್ ವಿರೋಧ ಪಕ್ಷದ ನಾಯಕನ ಹೆಸರು ಸೂಚಿಸಿದರೂ ಮಾತನಾಡಲು ಅವಕಾಶ ಕೊಡಲಿಲ್ಲ. ಇದು ಎಂಥಾ ವ್ಯವಸ್ಥೆ? ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ಕೊಡಲಿಲ್ಲವೆಂದರೆ ಜನರ ಸಮಸ್ಯೆಗಳು ಅರಿವಾಗುವುದಾದರೂ ಹೇಗೆ? ಅಮೆರಿಕಾ ಭಾರತದ ಮೇಲೆ ವಿಧಿಸುತ್ತಿರುವ ಸುಂಕದ ಬಗ್ಗೆಯೂ ಮಾತನಾಡಲು ಬಿಡಲಿಲ್ಲ. ಎಸ್ ಸಿ/ಎಸ್ ಟಿ, ಒಬಿಸಿ ಸೇರಿದಂತೆ ಹಿಂದುಳಿದ ವರ್ಗದವರ ಮೀಸಲಾತಿಯನ್ನು ನಿಧಾನವಾಗಿ ಕೊನೆಗೊಳಿಸಲಾಗುತ್ತದೆ. ಇದೇ ರೀತಿ ಮುಂದುವರಿದರೆ ಮುಂದೊಮ್ಮೆ ಮೋದಿ ದೇಶವನ್ನೇ ಮಾರುತ್ತಾರೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

ಮುಂದಿನ ಸುದ್ದಿ
Show comments