Select Your Language

Notifications

webdunia
webdunia
webdunia
webdunia

ಕ್ಷೇತ್ರಗಳ ಅಧ್ಯಯನಕ್ಕೆ ಮುಂದಾದ ಬಿಜೆಪಿ

ಕ್ಷೇತ್ರಗಳ ಅಧ್ಯಯನಕ್ಕೆ  ಮುಂದಾದ ಬಿಜೆಪಿ
ಲಕ್ನೋ , ಶನಿವಾರ, 19 ಮಾರ್ಚ್ 2022 (10:07 IST)
ಲಕ್ನೋ : ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಈಗ ಕಡಿಮೆ ಅಂತರದಲ್ಲಿ ಸೋತ ಮತ್ತು ಜಯಗಳಿಸಿದ ಕ್ಷೇತ್ರಗಳನ್ನು ಅಧ್ಯಯನ ಮಾಡಲು ಮುಂದಾಗಿದೆ.
 
ಉತ್ತರ ಪ್ರದೇಶ ಸರ್ಕಾರ ರಚನೆ ಮತ್ತು ಎಂಎಲ್ಸಿ ಚುನಾವಣೆ ಮುಕ್ತಾಯವಾದ ಬಳಿಕ ಬಿಜೆಪಿ ಸೋಲಿನ ವಿಶ್ಲೇಷಣೆ ನಡೆಸಲಿದೆ.

2017ರ ಚುನಾವಣೆ ನಡೆದ ಬಳಿಕ ಕಡಿಮೆ ಅಂತರದಲ್ಲಿ ಸೋತ ಮತ್ತು ಗೆದ್ದ ಕ್ಷೇತ್ರಗಳ ಚುನಾವಣೆ ನಡೆಸಿತ್ತು. ಈ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗಿತ್ತು. ಈಗಲೂ ನಾವು ಇದನ್ನು ಮುಂದುವರೆಸುತ್ತೇವೆ ಎಂದು ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ವಿಜಯ್ ಬಹದ್ದೂರ್ ತಿಳಿಸಿದ್ದಾರೆ.

 ಈ ವಿಶ್ಲೇಷಣೆಯಿಂದ ಕಳೆದ ಬಾರಿ ಸೋತಿದ್ದ 72 ಕ್ಷೇತ್ರಗಳ ಪೈಕಿ 26ರಲ್ಲಿ ಜಯಗಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ 18 ಬಿಜೆಪಿ ಅಭ್ಯರ್ಥಿಗಳು 5 ಸಾವಿರ ಮತಗಳ ಅಂತರದಿಂದ ಸೋತಿದ್ದರೆ 6 ಅಭ್ಯರ್ಥಿಗಳು 1 ಸಾವಿರ ಮತಗಳ ಅಂತರದಿಂದ ಸೋತಿದ್ದರು. 

ಕಾಂಗ್ರೆಸ್ ಪಕ್ಷದಂತೆ ರಾಜ್ಯದ ಅಧ್ಯಕ್ಷರ ಮೇಲೆ ಹೊಣೆ ಹೊರಿಸಿ ಅವರಿಂದ ರಾಜೀನಾಮೆ ಪಡೆಯುವುದಿಲ್ಲ. ನಾವು ಬೂತ್ ಮಟ್ಟಕ್ಕೆ ಹೋಗಿ ಸೋಲಿಗೆ ಕಾರಣ ಹುಡುಕುತ್ತೇವೆ. ಹಿನ್ನೆಡೆಗೆ ಕಾರಣರದವರನ್ನು ಸೋಲಿಗೆ ಉತ್ತರದಾಯಿಗಳನ್ನಾಗಿ ಮಾಡುತ್ತೇವೆ ಬಳಿಕ ಬದಲಾವಣೆ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ರಚಿಸದಂತೆ ಎಲ್ಲಾ ಪ್ರಯತ್ನಕ್ಕೂ ಸಿದ್ಧ: ಕಾಮತ್